ನ್ಯೂಯೊರ್ಕ್ – ತಮ್ಮ ಮೇಲಿರುವ ಆರೋಪಗಳ ವಿಚಾರವಾಗಿ ಸ್ವಇಚ್ಛೆಯಿಂದ ಕೋರ್ಟಿಗೆ ಹಾಜರಾದ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Former American president Donal Trump) ಅವರು ನ್ಯೂಯೊರ್ಕ್ ನಲ್ಲಿ ಬಂಧಿಸಲಾಯಿತು (Arrested).
ಅವರ ಬೆರಳಚ್ಚನ್ನು ಪಡೆದ ನಂತರ ಅವರನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಯಿತು. Businessದಲ್ಲಿ ಮೋಸ, ಅನೈತಿಕ ನಡವಳಿಕೆ ಮುಂತಾದ ಸುಮಾರು ಮೂವತ್ತು ಆರೋಪಗಳನ್ನು ಎದುರಿಸುತ್ತಿರುವ ಟ್ರಂಪ್ ಅಮೆರಿಕಾದಲ್ಲಿ ಹೀಗೆ ಬಂಧನಕ್ಕೊಳಗಾದ ಪ್ರಥಮ ಮಾಜಿ ಅಧ್ಯಕ್ಷರಾಗಿದ್ದಾರೆ.
ಪೋಲೀಸರ ಸುಪರ್ದಿಯಲ್ಲಿ ಟ್ರಂಪ್ ಅವರು ಕೋರ್ಟಿಗೆ ಹೋಗುವ ಸಂದರ್ಭದಲ್ಲಿ ಅವರು ತಮ್ಮ ಬೆಂಬಲಿಗರೆಡೆಗೆ ಕೈಬೀಸಿದ್ದಾರೆ. ಕೋರ್ಟಿನಲ್ಲಿ ಆರೋಪಪಟ್ಟಿ ಸಲ್ಲಿಕೆಯಾದನಂತರ ಟ್ರಂಪ್ ಅವರು ತಾನು ನಿರಪರಾಧಿ ಎಂದು ನ್ಯಾಯಾಧೀಶರ ಮುಂದೆ ಪ್ರಮಾಣ ಮಾಡಿದ್ದಾರೆ.
ಇವರ ವಕೀಲರ ವಾದವನ್ನು ಆಲಿಸಿ ಕೆಲವು ಷರತ್ತುಗಳನ್ನು ಹಾಕಿ ಟ್ರಂಪ್ ಅವರನ್ನು ಬಿಡುಗಡೆ ಮಾಡಲಾಗಿದೆ. ಕೋರ್ಟ್ ಕಾರ್ಯ ಮುಗಿಸಿಕೊಂಡು ಟ್ರಂಪ್ ಫ್ಲೋರಿಡಾಗೆ ಹೋಗುವ ನಿರೀಕ್ಷೆ ಇದೆ. ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.
ಹಾಗೇ ಇವರ ಬಂಧನದ ವಿಚಾರವಾಗಿ ಅಮೆರಿಕಾದ ಅಧ್ಯಕ್ಷರಾದ ಜೋ ಬೈಡೆನ್ ಅವರ ಕಚೇರಿ ಕೂಡ ಪ್ರತಿಕ್ರಿಯಿಸಲು ನಿರಾಕರಿಸಿದೆ.