ಬೆಂಗಳೂರು,ಫೆ.9-
ಪ್ರಸಕ್ತ ವಿಧಾನಸಭೆಯ ಕೊನೆಯ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸದಸ್ಯರು ಸಬೂಬು ಹೇಳದೆ ಕಲಾಪದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ವಿಧಾಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣಾ ವರ್ಷವಾಗಿರುವುದರಿಂದ ನೆಪ ಹೇಳದೆ ಎಲ್ಲ ಸದಸ್ಯರು ಕಡ್ಡಾಯವಾಗಿ ಕಲಾಪದಲ್ಲಿ ಪಾಲ್ಗೊಳ್ಳಬೇಕು. ನಿಮ್ಮ ಜವಾಬ್ದಾರಿ ಅರಿತು ಪಾಲ್ಗೊಳ್ಳಿ. ಇದು ಪ್ರಜಾಪ್ರಭುತ್ವದ ಜವಾಬ್ದಾರಿ ಎಂಬುದನ್ನು ಯಾರೊಬ್ಬರು ಮರೆಯಬಾರದು’ ಎಂದು ಕಿವಿಮಾತು ಹೇಳಿದರು.
‘ನಾನು ಸಭಾಧ್ಯಕ್ಷನಾಗಿ ನಿಮ್ಮ ಪರವಾಗಿ ಮತ್ತು ಮತದಾರರಿಗೆ ಮನವಿ ಮಾಡಿಕೊಳ್ಳುತ್ತೇನೆ. Election ಎನ್ನುವ ಕಾರಣಕ್ಕೆ ಸದನದ ಘನತೆ ಕುಗ್ಗಬಾರದು. ಕೊನೆಯ ಅಧಿವೇಶನ ಇದಾಗಿರುವುದರಿಂದ 5 ವರ್ಷಗಳ ತಮ್ಮ ಸಾರ್ವಜನಿಕ ಜೀವನ ಯಶಸ್ವಿಯಾಗಿ ಮುನ್ನಡೆಸಲು ಕಾರಣವಾಗಿದೆ. ಜೊತೆಗೆ ತಮ್ಮ ಜವಾಬ್ದಾರಿ ಕೂಡ ಹೆಚ್ಚಾಗಿದೆ. ಆಯ್ಕೆಯಾದ ಸದಸ್ಯರು ಮತದಾರರ ಋಣವನ್ನು ತೀರಿಸಲು ಇದೊಂದು ಸುವರ್ಣಾವಕಾಶ. 224 ಸದಸ್ಯರೂ ಸದನಕ್ಕೆ ಹಾಜರಾಗಬೇಕು’ ಎಂದರು.
‘ಕಳೆದ ಡಿಸೆಂಬರ್‍ನಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿತ್ತು. ಬಳಿಕ ನಾಳೆಯಿಂದ ಕೊನೆಯ ಅಧಿವೇಶನ ಆರಂಭವಾಗಲಿದೆ. ಒಟ್ಟು 11 ದಿನಗಳ ಕಾಲ ಕಲಾಪ ನಡೆಯಲಿದ್ದು, 24ರ ನಂತರವು ಚುನಾವಣಾ ನೀತಿ ಸಂಹಿತೆ ಅನ್ವಯವಾಗದೆ ಕಲಾಪ ನಡೆಸಲು ಅವಕಾಶ ಸಿಗುತ್ತದೆ’ ಎಂದರು. ‘ಈ ಬಾರಿಯ ಅಧಿವೇಶನದಲ್ಲಿ ಒಟ್ಟು 7 ವಿಧೇಯಕಗಳು ಮಂಡನೆಯಾಗಲಿದೆ. ಕನ್ನಡ ಸಮಗ್ರ ವಿಧೇಯಕ ಹಾಗೂ 6 ಖಾಸಗಿ ಮಸೂದೆಗಳನ್ನು ವೇಳಾಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಒಟ್ಟು ಆರು ದಿನಗಳ ಕಾಲ ಚರ್ಚೆ ನಡೆಯಲಿದೆ. ನಿಯಮದಂತೆ ಶೂನ್ಯವೇಳೆ, ಖಾಸಗಿ ಕಲಾಪ ನಡೆಯಲಿದೆ. ಸದಸ್ಯರಿಂದ 1300 ಪ್ರಶ್ನೆಗಳು ಬಂದಿದ್ದು, ಚುಕ್ಕಿ ಇಲ್ಲದ ಪ್ರಶ್ನೆಗಳು ಸಹ ಬಂದಿವೆ’ ಎಂದು ತಿಳಿಸಿದರು.
1 Comment
Релокация в Испанию Релокация в Испанию .