ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಾರಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಧು ಎಂಬುವರ ಪತ್ನಿ ಸಹನ(35) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದಾರೆ.
ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು,
ಪತ್ನಿ ಆತ್ಮಹತ್ಯೆ ಬಳಿಕ ಪತಿ ಮಧು ಕುಟುಂಬ ನಾಪತ್ತೆಯಾಗಿದ್ದು, ಮೃತ ಗೃಹಿಣಿ ಸಹನ ಪೋಷಕರಿಂದ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ.
ಮನೆಯ ಮುಂದೆ ಇದ್ದ ಆರೋಪಿ ಮಧು ಕಾರನ್ನ ಸಹನಾ ಪೋಷಕರು ಜಖಂಗೊಳಿಸಿದ್ದಾರೆ. ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ಪಡೆದು ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ನೇಣಿಗೆ ಶರಣು
Previous Articleಮತ್ತೆ ರಿಲೀಸ್ ಆಗುತ್ತಿದೆ ಟೈಟಾನಿಕ್!
Next Article ಕಂಗನಾ ರಣಾವತ್ ಅವರ ‘ಆಜ್ ಮೇರಾ ಘರ್…’ ವೀಡಿಯೋ ವೈರಲ್