ತುಮಕೂರು: ರಾಜ್ಯ ವಿಧಾನಸಭೆ Electionಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ನಾಯಕರ ಪ್ರಚಾರದ ಭರಾಟೆ ತೀವ್ರಗೊಂಡಿದೆ ಈ ನಡುವೆ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಡಾ. ಜಿ ಪರಮೇಶ್ವರ್ (Dr. G Parameshwar) ಅವರು ಕಲ್ಲು ತೂರಾಟದಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ
ಕೊರಟಗೆರೆ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಅವರು ತಾಲ್ಲೂಕಿನ ಭೈರೇನಹಳ್ಳಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದರು.
ಈ ವೇಳೆ ಕಲ್ಲು ತೂರಿದ್ದು, ಡಾ.ಜಿ.ಪರಮೇಶ್ವರ (Dr. G Parameshwar) ಗಾಯಗೊಂಡಿದ್ದಾರೆ. ತಲೆಗೆ ಗಾಯವಾಗಿದ್ದು, ಸಮೀಪದ ಅಕ್ಕಿರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಪ್ರಚಾರ ಸಮಯದಲ್ಲಿ ಕಾರ್ಯಕರ್ತರು ಪರಮೇಶ್ವರ ಅವರನ್ನು ಎತ್ತಿಕೊಂಡು ಹೂವು ಸುರಿದಿದ್ದಾರೆ. ಈ ಸಮಯದಲ್ಲಿ ತೂರಿಬಂದ ಕಲ್ಲು ತಲೆಗೆ ಬಿದ್ದಿದೆ. ತಲೆಯಿಂದ ರಕ್ತ ಸುರಿದಿದ್ದು, ಬಟ್ಟೆಯಿಂದ ತಲೆಯನ್ನು ಒತ್ತಿ ಹಿಡಿದುಕೊಂಡಿದ್ದಾರೆ. ನಂತರ ಅವರನ್ನು ಅಕಿರಾಂಪುರದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ.
ಹೂವು ಸುರಿಯುವ ಸಂದರ್ಭ ನೋಡಿಕೊಂಡು ದುಷ್ಕರ್ಮಿಗಳು ಕಲ್ಲು ತೂರಿರಬಹುದು ಎನ್ನಲಾಗಿದೆ.
ಈ ಘಟನೆಯನ್ನು ಬಲವಾಗಿ ಖಂಡಿಸಿರುವ ಕಾಂಗ್ರೆಸ್ ಸೋಲುವ ಭೀತಿಯಿಂದ ಬಿಜೆಪಿ ನಾಯಕರು ಕುತಂತ್ರ ಮಾಡಿ ಇಂತಹ ಕೃತ್ಯಗಳನ್ನು ಮಾಡಿಸುತ್ತಿದ್ದಾರೆ ಎಂದು ಆಪಾದಿಸಿದೆ. (Dr. G Parameshwar)
ಈ ಬಗ್ಗೆ ಹೇಳಿಕೆ ನೀಡಿರುವ ಪಕ್ಷದ ವಕ್ತಾರ ರಮೇಶ್ ಬಾಬು ಈ ಹಿಂದೆ ಡಾ. ಪರಮೇಶ್ವರ್ ಅವರು ನಾಮಪತ್ರ ಸಲ್ಲಿಸುವ ವೇಳೆ ಕೂಡ ಕಲ್ಲು ತೂರಾಟ ನಡೆದಿತ್ತು ಇದರಿಂದ ಮಹಿಳಾ ಪೇದೆಯೊಬ್ಬರು ಗಾಯಗೊಂಡಿದ್ದರು ಈಗ ಮತ್ತೆ ಅವರ ಮೇಲೆ ಇಂಥದೆ ದಾಳಿಯಾಗಿದೆ ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಅಲ್ಲದೆ ನಮ್ಮ ಅಭ್ಯರ್ಥಿ ಪರಮೇಶ್ವರ್ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. (Dr. G Parameshwar)
Also read.