ಬೆಂಗಳೂರು, ನ.1 – ಜೆಪಿ ನಗರದ ದಾಲ್ಮಿಯಾ ಸರ್ಕಲ್‌ನಲ್ಲಿ ಎಲೆಕ್ಟ್ರಿಕ್ ಕಾರೊಂದು ಹೊತ್ತಿ ಉರಿದಿದ್ದು, ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಕಾರು ಧಗಧಗಿಸುತ್ತಿರುವುದನ್ನು ನೋಡಬಹುದು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ವಾಹನದಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿಗೆ ಏಕೆ ಬೆಂಕಿ ತಗುಲಿತು ಎಂಬುದಕ್ಕೆ ಇನ್ನೂ ಕಾರಣ ತಿಳಿದಿಲ್ಲ. ಈ ಘಟನೆಯಿಂದಾಗಿ ಮತ್ತೊಮ್ಮೆ ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ.