ಬೆಂಗಳೂರು, ಫೆ.28: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ರಾಜ್ಯದ ಜನತೆಗೆ ಕರ್ನಾಟಕ (Karnataka) ವಿದ್ಯುತ್ ದರ ನಿಯಂತ್ರಣ ಆಯೋಗ ಸಿಹಿ ಸುದ್ದಿಯೊಂದನ್ನು ನೀಡಿದೆ.
ವಿದ್ಯುತ್ ದರ ಪರಿಷ್ಕರಣೆ ಮಾಡುವಂತೆ ಕೋರಿ ವಿದ್ಯುತ್ ವಿತರಣಾ ಸಂಸ್ಥೆಗಳು ಸಲ್ಲಿಸಿದ್ದ ಮನವಿಯ ಕುರಿತಂತೆ ವಿಚಾರಣೆ ಪೂರ್ಣಗೊಳಿಸಿರುವ ಕೆಇಆರ್‌ಸಿ ತನ್ನ ತೀರ್ಪು ಪ್ರಕಟಿಸಿದ್ದು ದರದಲ್ಲಿ ಬಾರಿ ಪ್ರಮಾಣದ ಮಾರ್ಪಾಟು ಮಾಡಿದೆ
100 ಯೂನಿಟ್ ಗಳಿಗಿಂತ ಹೆಚ್ಚಿನ ವಿದ್ಯುತ್ ಬಳಸುವ ಗೃಹ ಬಳಕೆ ವಿದ್ಯುತ್ ಗ್ರಾಹಕರಿಗೆ ಪ್ರತಿ ಯೂನಿಟ್ ಗೆ 110 ಪೈಸೆ ಇಳಿಕೆ ಮಾಡಲಾಗಿದೆ ಅದೇ ರೀತಿ ವಾಣಿಜ್ಯ ಬಳಕೆದಾರರಿಗೆ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ ಗೆ 125 ಇಳಿಕೆ ಮಾಡಲಾಗಿದೆ.
ಕೈಗಾರಿಕಾ ಬಳಕೆಗೆ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ ಗೆ 50 ಪೈಸೆ ಹೇಳಿಕೆ ಮಾಡಲಾಗಿದೆ ಅದೇ ರೀತಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ ಗೆ 40 ಪೈಸೆ ಇಳಿಕೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಇಂಧನ ಬಳಕೆ ಶುಲ್ಕದಲ್ಲಿ ಪ್ರತಿ ಯೂನಿಟ್ ಗೆ 50 ಪೈಸೆ ಇಳಿಕೆ ಮಾಡಲಾಗಿದ್ದು ಎಲ್ ಎಲ್ ಟಿ ಕೈಗಾರಿಕೆಗಳ ಇಂಧನ ಬಳಕೆ ನೂರು ಪೈಸೆ ಇಳಿಕೆ ಮಾಡಲಾಗಿದೆ.
ವಿದ್ಯುತ್ ಸರಬರಾಜು ಸಂಸ್ಥೆಗಳು ದರ ಪರಿಷ್ಕಾರಣ ಅರ್ಜಿಯಲ್ಲಿ 69 474.75 ಕೋಟಿಗಳಿಗೆ ಅನುಮೋದನೆ ಕೋರಿದ್ದವು ಇದನ್ನು ಪರಿಶೀಲಿಸಿದ ಆಯೋಗವು 64,944.54 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಿದೆ.
ಈ ಹಿಂದಿನ ಆದೇಶದಲ್ಲಿ ನಗರ ಮತ್ತು ಗ್ರಾಮೀಣ ಪ್ರವರ್ಗಗಳನ್ನು ಒಂದೇ ಪ್ರವರ್ಗದಲ್ಲಿ ವಿಲೀನಗೊಳಿಸಲಾಗಿತ್ತು ಇದನ್ನು ಬದಲಾಯಿಸಿರುವ ಹೊಸ ಆದೇಶ ಇದೀಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೈಗಾರಿಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಪ್ರತಿ ಯೂನಿಟ್ ಗೆ 30 ಪೈಸಾ ರಿಯಾಯಿತಿ ನೀಡಬಹುದು ಎಂದು ತಿಳಿಸಿದೆ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಖರೀದಿ ಮತ್ತು ಬಳಕೆಯನ್ನು ಉತ್ತೇಜಿಸಲು ಕೈಗಾರಿಕೆ ಮತ್ತು ವಾಣಿಜ್ಯ ಗ್ರಾಹಕರು ಅವರ ಆಯ್ಕೆಯಂತೆ ಅನ್ವಯವಾಗುವ ವಿದ್ಯುತ್ ದೊರಕಿಂತ ಪ್ರತಿ ಯೂನಿಟ್ ಗೆ 50 ಪೈಸೆ ಹೆಚ್ಚಿಸಿ ಹಸಿರು ದರವನ್ನು ಮುಂದುವರಿಸಲಾಗಿದೆ.