ಎಲೋನ್ ಮಸ್ಕ್ ಅವರು “ಟ್ವಿಟ್ಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ?” ಎಂದು ಕೇಳಿದ ಟ್ವಿಟ್ಟರ್ ಸಮೀಕ್ಷೆಯು ಸೋಮವಾರ ಮುಂಜಾನೆ ಕೊನೆಗೊಂಡಿತು, ಹೆಚ್ಚಿನ ಪ್ರತಿಸ್ಪಂದಕರು ಕೆಳಗಿಳಿಯಬೇಕು ಎಂದು ಹೇಳಿ ಮತ ಚಲಾಯಿಸಿದರು.
ಭಾನುವಾರ ಸಂಜೆ ಪ್ರಾರಂಭವಾದ ಈ ಅನೌಪಚಾರಿಕ ಸಮೀಕ್ಷೆಯ ಫಲಿತಾಂಶಗಳಿಗೆ ಬದ್ಧರಾಗಿರುವುದಾಗಿ ಮಸ್ಕ್ ಹೇಳಿದ್ದರು. ಶೇಖಡ 57.5% ರಷ್ಟು ಮಂದಿ ಹೌದು ಇಳಿಯಬೇಕು ಮತ್ತು 42.5% ರಷ್ಟು ಮಂದಿ ಮುಂದುವರೆಯಬೇಕು ಎಂದು ಹೇಳಿ ಮತ ಚಲಾಯಿಸುವ ಮೂಲಕ ಈ ಸಮೀಕ್ಷೆ ಮುಕ್ತಾಯಗೊಂಡಿತು.
ಟ್ವಿಟರ್‌ನ ಅಸ್ತವ್ಯಸ್ತವಾಗಿರುವ ನಾಯಕತ್ವದ ಬಗ್ಗೆ ಅನೌಪಚಾರಿಕ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಒಂದು ಕೋಟಿ ಎಪ್ಪತ್ತು ಲಕ್ಷಕ್ಕಿಂತಲೂ ಹೆಚ್ಚು ಮತಗಳು ಚಲಾವಣೆಯಾದವು, ಇದು ಸಾಮೂಹಿಕ ವಜಾಗಳು, ಟ್ವಿಟರ್‌ನ ನಿಯಮಗಳನ್ನು ಉಲ್ಲಂಘಿಸಿದ ಅಮಾನತುಗೊಳಿಸಿದ ಖಾತೆಗಳ ಮರುಹೊಂದಾಣಿಕೆ, ಮಸ್ಕ್ ಬಗ್ಗೆ ವರದಿ ಮಾಡುವ ಪತ್ರಕರ್ತರನ್ನು ಅಮಾನತುಗೊಳಿಸಿರುವುದು ಮತ್ತು ನೀತಿ ಬದಲಾವಣೆಗಳನ್ನು ಮಾಡಿರುವುದು ಮತ್ತು ಅದೇ ಸಮಯದಲ್ಲಿ ಪುನರ್ಸ್ಥಾಪಿಸಿರುವುದು ಎಲ್ಲದರ ಬಗೆಗಿನ ಜನಾಭಿಪ್ರಾಯವೆಂದು ಪರಿಗಣಿಸಲಾಗಿದೆ.
ಸಮೀಕ್ಷೆಯ ಫಲಿತಾಂಶಕ್ಕೆ ಮಸ್ಕ್ ತಕ್ಷಣವೇ ಪ್ರತಿಕ್ರಿಯಿಸಲಿಲ್ಲ.
Previous ArticleDK ಶಿವಕುಮಾರ್ ಗೆ ಮತ್ತೊಮ್ಮೆ IT ಹೊಡೆತ
Next Article ಬೆಂಗಳೂರಿನಲ್ಲಿದ್ದರು LTTE ಉಗ್ರರು