ಬೆಂಗಳೂರು,ಫೆ.12-
Metro ದಲ್ಲಿ ನಾಗಸಂದ್ರಕ್ಕೆ (Nagasandra) ಹೋಗಬೇಕಿದ್ದವರು ಗೊತ್ತಿಲ್ಲದೆ ಕೋಣನಕುಂಟೆ ಮಾರ್ಗಕ್ಕೆ ತೆರಳುತ್ತಿದ್ದ ರೈಲ್ವೆ ಹತ್ತಿದ್ದಾರೆ.ವಾಸ್ತವ ಗೊತ್ತಾಗುತ್ತಿದ್ದಂತೆ ತಕ್ಷಣ ಇಳಿಯಲು ತುರ್ತು ನಿರ್ಗಮನ ದ್ವಾರದ ಗುಂಡಿ ಒತ್ತಿದ್ದಾರೆ. ಇದರ ಪರಿಣಾಮವಾಗಿ ಸುಮಾರು 20 ನಿಮಿಷ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾದ ಘಟನೆ ನಿನ್ನೆ ಸಂಜೆ ನಡೆದಿದೆ. Emergency button ಒತ್ತಿದ್ದರಿಂದ ರೈಲು ಕುವೆಂಪು ಮೆಟ್ರೋ ನಿಲ್ದಾಣದ (Kuvempu Metro Station) ಅನತಿ ದೂರದಲ್ಲಿ ಕೆಲಹೊತ್ತು ನಿಂತಿತು. ಇದರಿಂದ ತುರ್ತಾಗಿ ತೆರಳಬೇಕಿದ್ದ ಇತರೆ ಪ್ರಯಾಣಿಕರು ಈ ಬೆಳವಣಿಗೆಯಿಂದ ಪರದಾಡುವಂತಾಯಿತು.
ಸಂಜೆ 6ರ ಸುಮಾರಿಗೆ ಹಳ್ಳಿಯಿಂದ ತರಕಾರಿ ಹೊತ್ತು ಬಂದಿದ್ದ ಇಬ್ಬರು ಕುವೆಂಪು ಮೆಟ್ರೋ ನಿಲ್ದಾಣದಿಂದ ರೈಲು ಏರಿದ್ದಾರೆ. ವಾಸ್ತವವಾಗಿ ನಾಗಸಂದ್ರಕ್ಕೆ ಹೋಗಬೇಕಿದ್ದ ಈ ಗ್ರಾಮೀಣರು ತಪ್ಪಾಗಿ ಬೇರೆ ಪ್ಲಾಟ್‌ಫಾರ್ಮ್‌ನಿಂದ ರೈಲು ಹತ್ತಿದ್ದಾರೆ. ಇದು ಕೆಲ ಸಮಯದ ನಂತರ ಅವರ ಅರಿವಿಗೆ ಬಂದಿದೆ. ಇದರಿಂದ ಗೊಂದಲಕ್ಕೆ ಒಳಗಾದ ಅವರು ಪ್ರಯಾಣಿಕರ ಸಲಹೆ ಮೇರೆಗೆ ಎಮರ್ಜೆನ್ಸಿ ದ್ವಾರದ ಬಟನ್ ಒತ್ತಿದ್ದಾರೆ. ಹಠಾತ್ ರೈಲು ನಿಂತಿದ್ದರಿಂದ ಉಳಿದ ಪ್ರಯಾಣಿಕರಿಗೆ ಏನಾಗಿದೆ ಎಂಬುದು ತಿಳಿಯದೆ ಆತಂಕಕ್ಕೆ ಒಳಗಾದರು. ನಂತರ ಮೆಟ್ರೋ ರೈಲ್ವೆ ಸಿಬ್ಬಂದಿ ಆಗಮಿಸಿ ಎಮರ್ಜೆನ್ಸಿ ಬಾಗಿಲು ಬಂದ್ ಮಾಡಿಸಿ ಬಳಿಕ ರೈಲು ಸಂಚರಿಸಲು ಅನುವು ಮಾಡಿಕೊಟ್ಟರು. ಅಲ್ಲದೆ ಇಬ್ಬರನ್ನು ಬೇರೆ ಪ್ಲಾಟ್‌ಫಾರ್ಮ್‌ನಲ್ಲಿ ಇಳಿಸಿ ತೆರಳಬೇಕಾದ ಮಾರ್ಗದ ಬಗ್ಗೆ ತಿಳಿಸಲಾಗಿದೆ ಎಂದು BMRCL ಸಾರ್ವಜನಿಕ ಸಂಪರ್ಕಾಧಿಕಾರಿಗಳು ಮಾಹಿತಿ ನೀಡಿದರು.
3 Comments
Вывод из запоя на дому Вывод из запоя на дому .
Кодирование от алкоголизма Алматы Кодирование от алкоголизма Алматы .
лечение алкоголизма по довженко [url=http://www.xn—–7kcablenaafvie2ajgchok2abjaz3cd3a1k2h.xn--p1ai]лечение алкоголизма по довженко[/url] .