27.73 ಕೋಟಿ ಭಾರತೀಯರ ವೃದ್ಧಾಪ್ಯ ಉಳಿತಾಯವನ್ನು ನಿರ್ವಹಿಸುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಪೋರ್ಟ್‌ಗಳಲ್ಲಿ ಹೂಡಿಕೆ ಮಾಡುವುದನ್ನು ಈಗಲೂ ಮುಂದುವರೆಸಿದೆ. .
ಮಾರ್ಚ್ 27 ರಂದು ದಿ ಹಿಂದೂ ಪತ್ರಿಕೆಯ ವರದಿಯ ಪ್ರಕಾರ, EPFO ಬಂಧಿತ ಹೂಡಿಕೆದಾರ ಆಗಿದೆ ಏಕೆಂದರೆ ಈ ಎರಡು ಅದಾನಿ ಷೇರುಗಳು ಸೆನ್ಸೆಕ್ಸ್ ಮತ್ತು ನಿಫ್ಟಿಯ ಭಾಗವಾಗಿದ್ದು, EPFO-ನಿರ್ವಹಣೆಯ ನಿಧಿಗಳಿಂದ ಟ್ರ್ಯಾಕ್ ಮಾಡಲಾಗುತ್ತಿದೆ.
EPFO ತನ್ನ ಮೂಲನಿಧಿಯ ಶೇಖಡ 15 ರನ್ನು ಷೇರು ವಿನಿಮಯ ಕೇಂದ್ರಗಳು ವಹಿವಾಟು ಮಾಡುವ ನಿಧಿಗಳಲ್ಲಿ ಹೂಡಿಕೆ ಮಾಡುತ್ತದೆ ಎಂದು ವರದಿ ಹೇಳಿದೆ. ಮಾರ್ಚ್ 2022 ರಷ್ಟರವರೆಗೆ ಇದು ETFಗಳಲ್ಲಿ ರೂ 1.57 ಲಕ್ಷ ಕೋಟಿ ಹೂಡಿಕೆ ಮಾಡಿರುವುದು ತಿಳಿದು ಬಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಮತ್ತೊಂದು 8,000 ಕೋಟಿ ರೂ ಹೂಡಿಕೆಯಾಗಿರುವುದು ಕಂಡುಬಂದಿದೆ.
ಯುಎಸ್ ಮೂಲದ Hindenburg Research ಜನವರಿ ಅಂತ್ಯದಲ್ಲಿ ಅದಾನಿ ಸಮೂಹವು ತನ್ನ ಸ್ಟಾಕ್ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸುವ ವ್ಯಾಪಕ ಕುಶಲತೆ ಮತ್ತು ದುಷ್ಕೃತ್ಯಗಳನ್ನು ಮಾಡುತ್ತಿದೆ ಎಂದು ಆರೋಪ ಮಾಡಿ ವರದಿ ಪ್ರಕಟಿಸಿತ್ತು. ಗೌತಮ್ ಅದಾನಿ ನೇತೃತ್ವದ ಗುಂಪು ಈ ಆರೋಪಗಳನ್ನು ನಿರಾಕರಿಸಿತು ಆದರೆ ಆ ಕಂಪನಿಗಳ ಷೇರುಗಳ ಮೇಲಾದ ಸುತ್ತಿಗೆಯ ಪ್ರಹಾರವನ್ನು ಮಾತ್ರ ಇಂದಿನವರೆಗೆ ಸಂಭಾಳಿಸಲು ಅದಾನಿ ಸಮೂಹಕ್ಕೆ ಸಾಧ್ಯವಾಗಿಲ್ಲ. ಹೀಗಿರುವಾಗ ಈ ಸಮೂಹದಲ್ಲಿ EPFOನ ಹೂಡಿಕೆ ಸುರಕ್ಷಿತವೇ ಎಂಬ ಪ್ರಶ್ನೆ ಅನೇಕರ ಮನದಲ್ಲಿ ಮೂಡತೊಡಗಿದೆ.