ನಾಗರೀಕ ಪ್ರಜ್ಞೆಯಿರುವವರು ಮತ್ತು ಸಂಭಾವಿತರು ವಾಸಿಸುವ ಬಡಾವಣೆಯೆಂದೇ ಹೆಸರುವಾಸಿಯಾಗಿದ್ದ ಜಯನಗರದಲ್ಲಿ ಈಗ ಕೆಲಸ ಇಲ್ಲದ ಮಾಜಿ ಕಾರ್ಪೊರೇಟರ್ ಗಳದ್ದೇ ದರ್ಬಾರು. ಅವ್ಯಾಹತವಾಗಿ ಈ ಬಡಾವಣೆಯನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಯಾವುದೊ ಫುಟ್ ಪಾತ್ ನಲ್ಲಿ ಯಾರನ್ನೋ ಕರೆದು ತಂದು ಕೂರಿಸುವುದು ಆಮೇಲೆ ಸ್ವಲ್ಪ ದಿನ ಆದ ಮೇಲೆ ಏನೋ ಡೀಲ್ ಮಾಡಿಕೊಂಡು ಅಲ್ಲೊಂದು ಪರ್ಮನೆಂಟ್ ಅಂಗಡಿ ಮಾಡಿಸಿಬಿಡೋದು. ಇದರ ಬಗ್ಗೆ ಜನ ಎಷ್ಟೇ ಆಕ್ಷೇಪ ವ್ಯಕ್ತಪಡಿಸಿದರೂ ಪೊಲೀಸ್ ಇಲಾಖೆಯಾಗಲಿ BBMP ಯಾಗಲಿ ಕ್ಯಾರೇ ಎನ್ನುತ್ತಿಲ್ಲ. ಜಯನಗರ 6ನೇ ಬ್ಲಾಕಿನಲ್ಲಿ ಹೀಗೊಂದು ಹೊಸ Business ಆರಂಭವಾಗಿ ಅದಕ್ಕೆ ಸಚಿವ ಆರ್ ಅಶೋಕ್ ಅವರ ಕೃಪೆ ಇದ್ದಂತಿದೆ. ಹಾಗೇ ಬಿಜೆಪಿ ನಾಯಕ ಎನ್ ಆರ್ ರಮೇಶ್ ಅವರ ಮುಖವೂ ಇಲ್ಲಿ ಕಾಣುತ್ತಿದೆ. ಫ್ಲೆಕ್ಸ್ ವಿರುದ್ಧದ ಹೈಕೋರ್ಟ್ ತೀರ್ಪು ಈ ಜನಕ್ಕೆ ಗೊತ್ತಿದ್ದಂತಿಲ್ಲ. ಇದರ ಬಗ್ಗೆ BBMP ಮತ್ತು ಪೊಲೀಸ್ ಏನು ಮಾಡುತ್ತಾರೆ ಎಂದು ನೋಡಬೇಕಿದೆ.
Previous ArticleUK ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ
Next Article ಚೇತನ್ ಅಹಿಂಸಾ ವಿರುದ್ಧ ಪ್ರಕರಣ ದಾಖಲು