ಬೆಂಗಳೂರು: ಕೋಮು ದ್ವೇಷ ಹರಡುತ್ತಿರುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ‘ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ’ದ ಅಧ್ಯಕ್ಷ ಸ್ಥಾನಕ್ಕೆ ಎಸ್.ಜಿ. ಸಿದ್ದರಾಮಯ್ಯ ಸೋಮವಾರ ರಾಜೀನಾಮೆ ನೀಡಿದ್ದಾರೆ.
ಪ್ರತಿಷ್ಠಾನದ ಸದಸ್ಯರಾದ ಎಚ್.ಎಸ್. ರಾಘವೇಂದ್ರ ರಾವ್, ನಟರಾಜ ಬೂದಾಳು, ಚಂದ್ರಶೇಖರ ನಂಗಲಿ ಸಹ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ನಾಡಗೀತೆಗೆ ಅವಮಾನವಾಗಿದೆ ಎಂದು ಕುವೆಂಪು ಪ್ರತಿಷ್ಠಾನ ಅಧ್ಯಕ್ಷ ಸ್ಥಾನಕ್ಕೆ ಹಂಪನಾ ರಾಜೀನಾಮೆ ನೀಡಿದ ಬೆನ್ನಲ್ಲೇ ಎಸ್.ಜಿ. ಸಿದ್ದರಾಮಯ್ಯ ಮತ್ತಿತರರು ರಾಜೀನಾಮೆ ನೀಡಿದ್ದಾರೆ.
ಡಾ.ಜಿಎಸ್ಸೆಸ್ ಪ್ರತಿಷ್ಠಾನಕ್ಕೆ ಎಸ್.ಜಿ. ಸಿದ್ದರಾಮಯ್ಯ ರಾಜೀನಾಮೆ
Previous Articleಮುಷ್ಕರವಿದ್ದರೂ ನಾಳೆ ಪೆಟ್ರೋಲ್ ಬಂಕ್ ಬಂದ್ ಇಲ್ಲ
Next Article ಬೆಂಗಳೂರಲ್ಲಿ ನಿರ್ಮಾಣ ಹಂತದ ಛಾವಣಿ ಕುಸಿತ