ನವದೆಹಲಿ: ತೈಲ ಸಂಸ್ಥೆಗಳು ಎಲ್ ಪಿ ಜಿ ಬಳಕೆದಾರರಿಗೆ ಶಾಕ್ ನೀಡಿವೆ. ಗೃಹ ಬಳಕೆಯ ಸಿಲಿಂಡರ್ ದರ ಮತ್ತೆ ಹೆಚ್ಚಳ ಮಾಡಲಾಗಿದೆ. ಪ್ರತಿ ಸಿಲಿಂಡರ್ ದರ 50 ರೂಪಾಯಿ ಹೆಚ್ಚಿಸಲಾಗಿದೆ. ನೂತನ ದರ ಇಂದಿನಿಂದಲೇ ಜಾರಿಗೆ ಬರಲಿದೆ.
ಬೇಸಿೆಗೆಗೆ ಹೋಲಿಸಿದರೆ ಮಳೆಗಾಲದಲ್ಲಿ ಗೃಹ ಬಳಕೆ ಸಿಲಿಂಡರ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಇದರ ಜತೆಗೆ 5 ಕಿಲೋ ಸಿಲಿಂಡರ್ ದರ ಕೂಡ ಹೆಚ್ಚಳಲಾಗಿದೆ. ಐದು ಕಿಲೋ ಸಿಲಿಂಡರ್ ದರ 18 ರೂಪಾಯಿ ಜಾಸ್ತಿ ಮಾಡಲಾಗಿದೆ.