ಬೆಂಗಳೂರು – ಉದ್ಯಾನ ನಗರಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ (Stray Dogs) ಹಾವಳಿ ತೀವ್ರಗೊಂಡಿದೆ.ಇವುಗಳ ನಿಯಂತ್ರಣಕ್ಕೆ ಸಂತಾನ ಹರಣ ಚಿಕಿತ್ಸೆ ಹೆಸರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆ.
ಕೆಲವು ಸ್ವಯಂ ಸೇವಾ ಸಂಸ್ಥೆಗಳು ನಾಯಿಗಳ ಸಂತಾನ ಹರಣ ಚಿಕಿತ್ಸೆ ಹೆಸರಲ್ಲಿ ಅಪಾರ ಪ್ರಮಾಣದ ಹಣ ಪಡೆದು ಆರ್ಥಿಕವಾಗಿ ಸಬಲವಾಗುತ್ತಿವೆ.ಹಣ ಬಿಡುಗಡೆ ಹೆಸರಲ್ಲಿ ಪಾಲಿಕೆ ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕೂಡ ಎಲ್ಲರಿಗೂ ಗೊತ್ತಿರುವ ಸಂಗತಿ.
ಪ್ರತಿ ವರ್ಷ ಅಪಾರ ಪ್ರಮಾಣದ ಹಣ ವೆಚ್ಚ ಮಾಡುತ್ತಿದ್ದರೂ ಬೀದಿ ನಾಯಿಗಳ (Stray Dogs) ಹಾವಳಿ ಕಡಿಮೆಯಾಗಿಲ್ಲ.ನಗರದ ಬೀದಿ ಬೀದಿಗಳಲ್ಲಿ ಮರಿ ನಾಯಿಗಳು ಓಡಾಡುತ್ತಲೇ ಇವೆ. ಹಾಗಾದರೆ ಸಂತಾನ ಹರಣ ಚಿಕಿತ್ಸೆಯ ಪರಿಣಾಮ ಏನಾಯಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬ್ರಾಂಡ್ ಬೆಂಗಳೂರು ಕುರಿತಂತೆ ಸಭೆ ನಡೆಸಿದ ವೇಳೆ ಈ ಪ್ರಶ್ನೆ ಉದ್ಭವಿಸುವ ಮೂಲಕ ಪಾಲಿಕೆ ಆಡಳಿತ ಹಾಗೂ ಕೆಲವು ಸ್ವಯಂ ಸೇವಾ ಸಂಸ್ಥೆಗಳ ಅಕ್ರಮದ ಕುರಿತು ಚರ್ಚೆ ನಡೆದಿದೆ.
ಇದನ್ನು ತಪ್ಪಿಸಲು ಇದೀಗ ನಾಯಿಗಳ ಗಣತಿಗೆ ಮುಂದಾಗಿದೆ ಅದು ವೈಜ್ಞಾನಿಕ ತಂತ್ರಜ್ಞಾನದ ಮೂಲಕ ಗಣತಿ ನಡೆಯಲಿದೆ.
ಈ ಹಿಂದೆ 2019ರಲ್ಲಿ ನಡೆದ ಗಣತಿಯಲ್ಲಿ ಸುಮಾರು ಮೂರು ಲಕ್ಷ ಬೀದಿ ನಾಯಿಗಳು (Stray Dogs) ಇರುವುದು ಪಾಲಿಕೆ ಗುರುತಿಸಿತ್ತು. ಈಗ ಪಾಲಿಕೆ ವ್ಯಾಪ್ತಿಯಲ್ಲಿ ಸಂತಾನ ಹರಣ ಚಿಕಿತ್ಸೆ ಬಳಿಕ ಎಷ್ಟು ನಾಯಿಗಳಿವೆ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಹೀಗಾಗಿ ನಾಯಿಗಳ ನಿಯಂತ್ರಣ ಹೇಗೆ ಮಾಡಬೇಕಾದರೆ ಗಣತಿ ಅವಶ್ಯವಾಗಿದೆ.
ಇದೀಗ ಬಿಬಿಎಂಪಿ ಡ್ರೋನ್ ತಂತ್ರಜ್ಞಾನದ ಮೂಲಕ ನಾಯಿಗಳ ಗಣತಿ ಮಾಡಲು ಸಜ್ಜಾಗಿದೆ. ನಾಲ್ಕು ವರ್ಷ ನಂತರ ಬೀದಿ ನಾಯಿ ಗಣತಿಗೆ ಬಿಬಿಎಂಪಿ ಮುಂದಾಗಿದ್ದು, ಇದೀಗ ದ್ರೋನ್ ನೆರವಿನಿಂದ ಗಣತಿ ನಡೆಯಲಿದೆ.
LATEST KANNADA NEWS | VARTHACHAKRA