ಬೆಳಗಾವಿ,ಡಿ.29-ಕಾರಾಗೃಹಗಳಲ್ಲಿ ಯಾವುದೇ ತರಹದ ಅಕ್ರಮ ಚಟುವಟಿಕೆಗಳಿಗೆ ಇಂಬು ನೀಡುವ, ಜೈಲು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ಎಚ್ಚರಿಕೆ ನೀಡಿದ್ದಾರೆ.
ನಗರದ ಕೇಂದ್ರ ಕಾರಾಗೃಹ, ಹಿಂಡಲಗಾ ಜೈಲಿಗೆ ಅನಿರೀಕ್ಷಿತ ಭೇಟಿ ನೀಡಿದ ನಂತರ, ಜೈಲಿನ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಜೈಲಿನೊಳಗೆ ಅಕ್ರಮವಾಗಿ ಮೊಬೈಲ್ ಗಳು ಹಾಗೂ ಮಾದಕ ವಸ್ತುಗಳನ್ನು ಸರಬರಾಜು ತಪ್ಪಿಸಲು ಅತ್ಯಾಧುನಿಕ ತಪಾಸಣಾ ಯಂತ್ರ ಗಳನ್ನು ಅಳವಡಿಸಲಾಗಿದೆ. ಆದರೂ ಕೆಲವು ಬಾರಿ ಸಿಬ್ಬಂದಿಗಳ ಕಣ್ಣು ತಪ್ಪಿಸಿ, ನಿಷೇಧಿತ ಪದಾರ್ಥಗಳು ಜೈಲಿ ನೊಳಗೆ ಜಪ್ತಿ ಮಾಡಿರುವುದು ನಡೆದಿದೆ ಇದಕ್ಕೆ ಕಡಿವಾಣ ಹಾಕಲಾಗುವುದು ಎಂದ ಸಚಿವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು, ಎಚ್ಚರಿಸಿದರು.
ಕಾರಾಗೃಹ ಭೇಟಿ ಸಮಯದಲ್ಲಿ, ಸಚಿವರು, ಸಜಾ ಬಂದಿಗಳು ಹಾಗೂ ವಿಚಾರಣಾಧೀನ ಕೈದಿಗಳ ಜತೆ ಸಂಭಾಷಣೆ ನಡೆಸಿದರು ಹಾಗೂ, ಮನವಿ ಪತ್ರ ಸ್ವೀಕರಿಸಿದರು.
ಜೈಲಿನ ಒಳಗಿರುವ ಟೈಲರಿಂಗ್ ಘಟಕ ಹಾಗೂ ಮರಗೆಲಸ ಘಟಕಗಳಿಗೆ ಭೇಟಿ ನೀಡಿದ ಸಚಿವರು ಆಧುನಿಕ ಉಪಕರಣ ಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅತಿ ಭದ್ರತಾ ಸೆಲ್ ಗಳು, ಆಸ್ಪತ್ರೆ ಹಾಗೂ ಕೈದಿಗಳೇ ನಿರ್ವಹಿಸುತ್ತಿರುವ ಎಫ ಎಂ ಸ್ಟೇಷನ್ ಅಡುಗೆ ಮನೆ ಹಾಗೂ ಇನ್ನಿತರ ವ್ಯವಸ್ಥೆಗಳ ಬಗ್ಗೆ ಸಚಿವರು ಮಾಹಿತಿ ಪಡೆದ ಸಚಿವರು, ಕಾರಾಗೃಹದ ಪ್ರಾರ್ಥನಾ ಮಂದಿರದಲ್ಲಿ ಇರುವ, ಸ್ವಾತಂತ್ರ್ಯ ವೀರ, ವೀರ ಸಾವರ್ಕರ್ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದರು.
ವೀರ ಸಾವರ್ಕರ್ ರವರು, ಹಿಂಡಲಗಾ ಜೈಲಿನಲ್ಲಿ ೯೭ ದಿನಗಳ ಕಾಲ ಬಂದಿಯಾಗಿದ್ದು, ಆ ಸಂಬಂಧ ಜೈಲಿನಲ್ಲಿರುವ ದಾಖಲೆ ಪುಸ್ತಕ ವನ್ನೂ, ಸಚಿವರು ವೀಕ್ಷಿಸಿದರು.
Previous Articleಸರ್ಕಾರದ ನಡೆಗೆ ಪ್ರಿಯಾಂಕ್ ಅಸಮಾಧಾನ
Next Article ಇಂತಹ ಹುಡುಗಿ ಇದ್ದರೆ ಹೇಳಿ ರಾಹುಲ್ ಗಾಂಧಿ ಮದುವೆಯಾಗ್ತಾರಂತೆ