ಛತ್ತೀಸ್‌ಗಢ: ಅಕ್ರಮ ಸಂಬಂಧವನ್ನು ಹೊಂದಿದ್ದ ಪುರುಷ ಹಾಗೂ ಯುವತಿಯನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಗ್ರಾಮವಿಡೀ ಸುತ್ತಾಡಿಸಿದ ಘಟನೆ ಛತ್ತೀಸಗಢದ ಕೊಂಡಗಾಂವ್ನ ಉರಂದರಬೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬರ್ಗೈ ಗ್ರಾಮದಲ್ಲಿ ನಡೆದಿದೆ.
ವಿವಾಹಿತನಾಗಿದ್ದ ಪುರುಷ ಯುವತಿಯೊಂದಿಗೆ ಏಕಾಂತದ ಕ್ಷಣ ಕಳೆಯುತ್ತಿದ್ದಾಗ ಪತ್ನಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಪತಿಯ ಕಳ್ಳಾಟವನ್ನು ಪತ್ನಿ ರೆಡ್‌ಹ್ಯಾಂಡ್ ಆಗಿ ಹಿಡಿದು, ಗ್ರಾಮಸ್ಥರೆಲ್ಲರನ್ನೂ ಸೇರಿಸಿದ ಪತ್ನಿಯು ಪತಿ ಮಾಡಿದ ಮೋಸವನ್ನು ವಿವರಿಸಿದ್ದಾಳೆ.
ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ವಿವಾಹಿತ ಹಾಗೂ ಯುವತಿಗೆ ಥಳಿಸಿ ಬಳಿಕ ಇಬ್ಬರನ್ನೂ ಬೆತ್ತಲೆಗೊಳಿಸಿ ಗ್ರಾಮದಲ್ಲಿ ರೌಂಡ್ಸ್ ಹಾಕಿಸಿದ್ದಾರೆ. ಈ ಸಂಬಂಧ ಪೊಲೀಸರು ಪತ್ನಿ ಸೇರಿದಂತೆ ನಾಲ್ವರು ಗ್ರಾಮಸ್ಥರನ್ನು ಬಂಧಿಸಿದ್ದಾರೆ.
Previous Articleಲೋಕಾಯುಕ್ತರ ಪ್ರಮಾಣ ವಚನ ಸ್ವೀಕಾರ
Next Article ಶಾಲೆಗೆ ಹೋಗುವ ಹುಮ್ಮಸ್ಸು: ಟೆರೇಸ್‌ನಿಂದ ಬಿದ್ದು ಬಾಲಕ ಸಾವು