ನಟ-ನಿರ್ಮಾಪಕ ಪ್ರತಾಪ್ ಪೋತೆನ್( 70) ಶುಕ್ರವಾರ ಬೆಳಿಗ್ಗೆ ಚೆನ್ನೈನಲ್ಲಿ ನಿಧನರಾದರು. ಅವರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಮಮ್ಮುಟಿ ಅಭಿನಯದ CBI5 ದಿ ಬ್ರೈನ್ ನಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಥಕಾರ, ಚಮರಂ, 22 ಸ್ತ್ರೀ ಕೊಟ್ಟಾಯಂ ಅವರ ಇತರೆ ಪ್ರಮುಖ ಚಿತ್ರಗಳು ಮಲಯಾಳಂ ಚಿತ್ರರಂಗದಲ್ಲಿ ಹೆಸರುವಾಸಿಯಾದ ಅವರು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರು 1985 ರ ಮೀಂದುಮ್ ಒರು ಕಾತಲ್ ಕತೈ ಚಲನಚಿತ್ರವನ್ನು ನಿರ್ದೇಶಿಸಿದ್ದಕ್ಕಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿದ್ದರು.ಈಗ ಶವವಾಗಿ ಪತ್ತೆ ಆಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
Previous Articleಡೊನಾಲ್ಡ್ ಟ್ರಂಪ್ ಮಾಜಿ ಪತ್ನಿ ಇವಾನಾ ಟ್ರಂಪ್ ನಿಧನ
Next Article ಸುಶ್ಮಿತಾ ಸೇನ್ ನನ್ನ ಬೆಟರ್ ಹಾಫ್ ಎಂದ ಲಲಿತ್ ಮೋದಿ