ಬಾಲಿವುಡ್ ನಟಿಯರಿಗೆ ಕರೆದು ಅವಕಾಶ ಕೊಡುತ್ತಾರೆ. ಇಲ್ಲಿನ ಪ್ರತಿಭೆಗಳನ್ನು ಗುರುತಿಸುವುದಿಲ್ಲ ಅನ್ನುವ ಆರೋಪ ಮೊದಲಿನಿಂದಲೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. 50 ವರ್ಷಗಳಿಂದ ಚಿತ್ರರಂಗದಲ್ಲಿರುವ ಹಿರಿಯ ನಟಿ ಜಯಸುಧಾ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ‘ಬಾಲಿವುಡ್ ನಟಿಯರು ಬಂದರೆ ಅವರಿಗೆ ನೀಡುವ ಆತಿಥ್ಯವೇ ಬೇರೆ. ಅವರು ಜೊತೆಗೆ ಕರೆದುಕೊಂಡು ಬರುವ ನಾಯಿಗಳಿಗೂ ರೂಮ್ ಬುಕ್ ಮಾಡಿ ಕೊಡುತ್ತಾರೆ. ಬಾಲಿವುಡ್ನಲ್ಲಿ ಕಂಗನಾ ರಣಾವತ್ಗೆ ಪದ್ಮಶ್ರೀ ಕೊಟ್ಟಿದ್ದಾರೆ. ನನಗಿಲ್ಲ. ಒಂದು ವೇಳೆ ನಾನು ಬಾಲಿವುಡ್ನಲ್ಲಿ 50 ವರ್ಷ ಸೇವೆ ಸಲ್ಲಿಸಿದ್ದರೆ ಇಂಡಸ್ಟ್ರಿಯವರು ಒಂದು ಹೂಗುಚ್ಛವನ್ನಾದರೂ ಕಳುಹಿಸುತ್ತಿದ್ದರು. ಆದರೆ ಟಾಲಿವುಡ್ನಲ್ಲಿ ಅದೂ ಇಲ್ಲ. ಇದೇ ಹೀರೋ ಆಗಿದ್ದರೆ ಅವರಿಗೆ ದೊಡ್ಡ ಹಬ್ಬ ಮಾಡಿ ಬಿಡುತ್ತಿದ್ದರು. ನಮನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ’ ಎಂದು ಜಯಸುಧಾ ಮಾತನಾಡಿದ್ದಾರೆ. ನಟಿ ಜಯಸುಧಾ 1985ರಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ ನೀ ತಂದ ಕಾಣಿಕೆ, ಮೊಂಡ, ತಾಯಿಯ ಮಡಿಲು, ವಜ್ರಕಾಯ ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಬಾಲಿವುಡ್ ನಟಿಯರ ನಾಯಿಗೂ ರೂಂ..! : ನಟಿ ಜಯಸುಧಾ ಅಸಮಾಧಾನ
Previous Articleಹುಬ್ಬಳ್ಳಿಯಲ್ಲಿ ಮತ್ತೊಂದು ಅಗ್ನಿ ದುರಂತ!
Next Article ಮಸೂದ್ ಫಾಝಿಲ್ ಮನೆಗೂ ಹೋಗ್ತಾರಂತೆ ಸಿಎಂ.