ಖ್ಯಾತ ನಟಿ ಪ್ರಿಯಾ ಆನಂದ್ ನಿತ್ಯಾನಂದನನ್ನು ಮದುವೆಯಾಗುವ ಆಸೆ ವ್ಯಕ್ತಪಡಿಸಿ ಸಂಚಲನ ಮೂಡಿಸಿದ್ದಾರೆ.
ರಾಜಕುಮಾರ, ಜೇಮ್ಸ್ ನಂತಹಾ ಹಿಟ್ ಚಿತ್ರಗಳಲ್ಲಿ ನಟಿಸಿರೋ ಪ್ರಿಯಾ ಆನಂದ್ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ ನನಗೆ ನಿತ್ಯಾನಂದ ಎಂದರೆ ತುಂಬಾ ಇಷ್ಟ. ನಿತ್ಯಾನಂದನಲ್ಲಿ ಆನಂದ ಇದೆ. ನನ್ನ ಹೆಸರು ಪ್ರಿಯಾ ಆನಂದ್, ನಾವು ಮದುವೆಯಾದರೆ ನನ್ನ ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ. ಜನರನ್ನು ಆಕರ್ಷಿಸುವುದು ಹೇಗೆಂದು ನಿತ್ಯಾನಂದನಿಗೆ ಗೊತ್ತಿತ್ತು. ಇಷ್ಟು ಜನ ಹಿಂಬಾಲಿಸುತ್ತಿದ್ದಾರೆ ಎಂದರೆ ಅವರಲ್ಲಿ ಏನೋ ಇದೆ ಎಂದು ಅರ್ಥ ಎಂದರು. ಪ್ರಿಯಾ ಆನಂದ್ ಈಗಾಗಲೇ ತಮ್ಮ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಆಗಾಗ ನಿತ್ಯಾನಂದನ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಈಗ ನಿತ್ಯಾನಂದನನ್ನು ಮದುವೆಯಾಗುವುದಾಗಿ ಹೇಳಿದ್ದಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Previous Articleಜೂಜಾಟದ ಗಲಾಟೆ ಇಬ್ಬರು ಯುವಕರಿಗೆ ಇರಿತ
Next Article ಗುಂಡ್ಯ ಸಮೀಪ ಆನೆಮರಿ ಶವ ಪತ್ತೆ