Bengaluru: 18 ವರ್ಷದ ಯುವಕ ಪ್ರಾಂಜಲ್ ಶ್ರೀವಾತ್ಸವ ಜುಲೈ 11 ಹಾಗು12ರಂದು ನಾರ್ವೆಯ ಓಸ್ಲೋದಲ್ಲಿ ನಡೆದ ಅಂತಾರಾಷ್ಟ್ರೀಯ ಗಣಿತ ಒಲಂಪಿಯಾಡ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಈ ಮೂಲಕ ಮೂರು ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಪ್ರಾಂಜಲ್ ಈ ವರ್ಷದ ಒಲಂಪಿಯಾಡ್ನಲ್ಲಿ ಒಟ್ಟು 34 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಪ್ರಾಂಜಲ್ 2019 ಹಾಗೂ 2021ರಲ್ಲಿಯೂ ಚಿನ್ನದ ಪದಕ ಗೆದ್ದಿದ್ದರು.