ಬಿಹಾರ,ಜು.22- ಭಾರತ-ನೇಪಾಳ ಗಡಿಯಲ್ಲಿರುವ ಬಿರಾಟ್ನಗರದಲ್ಲಿ ಇಂದು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 15 ಮಂದಿ ಕಳ್ಳಸಾಗಣೆದಾರರನ್ನು ಬಂಧಿಸಿ ಎರಡು ಕೆಜಿ ಯುರೇನಿಯಂ ವಶಪಡಿಸಿಕೊಂಡಿದ್ದಾರೆ.
ಹೆಚ್ಚು ವಿಕಿರಣಶೀಲ ನಿಷೇಧಿತ ವಸ್ತುಗಳನ್ನು ಕಳ್ಳಸಾಗಣೆದಾರರು ವಿದೇಶಗಳಿಗೆ ಸಾಗಿಸಲು ಯತ್ನಿಸುತ್ತಿದ್ದರು. ಅರಾರಿಯಾ ಜಿಲ್ಲೆಯ ಜೋಗ್ಬಾನಿ ಗಡಿ ಮೂಲಕ ಬಿಹಾರಕ್ಕೆ ನುಸುಳಲು ಆರೋಪಿಗಳು ಯೋಜಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಯುರೇನಿಯಂ ಎಂದರೇನು?: ಯುರೇನಿಯಂ ಒಂದು ರಾಸಾಯನಿಕ ಅಂಶವಾಗಿದ್ದು, ‘ಯು’ ಚಿಹ್ನೆಯನ್ನು ಹೊಂದಿದೆ. ಯುರೇನಿಯಂನ ಪರಮಾಣು ಸಂಖ್ಯೆ 92 ಆಗಿದ್ದು, ಅದು 92 ಪ್ರೋಟಾನ್‌ಗಳನ್ನು ಮತ್ತು 92 ಎಲೆಕ್ಟ್ರಾನ್‌ಗಳನ್ನು ಹೊಂದಿದೆ. ಅವುಗಳಲ್ಲಿ 6 ವೇಲೆನ್ಸಿ ಎಲೆಕ್ಟ್ರಾನ್‌ಗಳಾಗಿವೆ. 1789 ರಲ್ಲಿ ಜರ್ಮನ್ ರಸಾಯನಶಾಸ್ತ್ರಜ್ಞ ಮಾರ್ಟಿನ್ ಹೆನ್ರಿಕ್ ಕ್ಲಾಪ್ರೋತ್ ಮೊದಲ ಬಾರಿಗೆ ಯುರೇನಿಯಂ ಅಂಶವನ್ನು ಕಂಡುಹಿಡಿದರು.
ಯುರೇನಿಯಂ ನಮ್ಮ ಭೂಮಿಯಲ್ಲಿ ಬಹಳ ಅಪರೂಪವಾಗಿ ಲಭ್ಯವಿರುವ ಖನಿಜವಾಗಿದೆ. ಇದರಲ್ಲಿರುವ ಪರಮಾಣು ಗುಣಗಳಿಂದಾಗಿ ಪರಮಾಣು ವಿದ್ಯುತ್ ಉತ್ಪಾದನೆ ಮತ್ತು ಪರಮಾಣು ಶಸ್ತ್ರಾಸ್ತ್ರ, ಅಣು ಬಾಂಬ್ ಇತ್ಯಾದಿ ತಯಾರಿಕೆಗೆ ಸಹಾಯವಾಗುತ್ತದೆ. ಜೊತೆಗೆ ಔಷಧ, ಎಕ್ಸ್-ರೇ, ಫೋಟೋಗ್ರಫಿ ಇತ್ಯಾದಿಗಳಿಗೂ ಯುರೇನಿಯಮ್ ಬಳಕೆಯಾಗುತ್ತದೆ. ವಿಮಾನ ನಿಯಂತ್ರಣ ಮೇಲ್ಮೈಗಳಿಗೆ ಕೌಂಟರ್‌ವೇಟ್‌ಗಳಾಗಿ ಬಳಸಲಾಗುತ್ತದೆ. ಯುರೇನಿಯಂನಿಂದ ರೇಡಿಯಂ ಹೊರತೆಗೆಯಲಾಗುತ್ತದೆ. 1ಗ್ರಾಂ ಯುರೇನಿಯಂನಿಂದ ಒಂದು ಮೆಗಾ ವ್ಯಾಟ್ ವಿದ್ಯುತ್ ಶಕ್ತಿ ಸಿಗುತ್ತದೆ. ಇದು 3 ಟನ್ ಕಲ್ಲಿದ್ದಲಿಗೆ ಸಮ ಎಂದು ಹೆಳಲಾಗುತ್ತದೆ. ಆದರೆ, ಪರಮಾಣು ಸ್ಥಾವರಗಳು ಯಾವತ್ತಿದ್ದರೂ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂಬ ಭಯದಲ್ಲಿ ವಿಶ್ವಾದ್ಯಂತ ಇದರ ಬಳಕೆ ಕಡಿಮೆಯಾಗುತ್ತಿದೆ.
ನಿಕ್ಷೇಪಗಳು ಪತ್ತೆ ಎಲ್ಲೆಲ್ಲಿ?:
ಕಝಾಕಿಸ್ತಾನ್ದಲ್ಲಿ ಅತಿ ಹೆಚ್ಚು ಯುರೇನಿಯಂ ಖನಿಜ ಸಂಗ್ರಹವಿದೆ. ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲೂ ಸಾಕಷ್ಟು ಯುರೇನಿಯಂ ನಿಕ್ಷೇಪಗಳು ಸಿಕ್ಕಿವೆ. ಅಮೆರಿಕ, ರಷ್ಯಾ, ಉಕ್ರೇನ್, ಉಜ್ಬೆಕಿಸ್ತಾನ್ ದೇಶಗಳಲ್ಲದೇ ಆಫ್ರಿಕಾದ ನೈಜರ್ ಮತ್ತು ನಮೀಬಿಯಾ ದೇಶಗಳಲ್ಲಿ ಯುರೇನಿಯಂ ಸಂಗ್ರಹವಿದೆ. ಇದೀಗ ಭಾರತದ ಕೆಲವು ರಾಜ್ಯಗಳಲ್ಲೂ ಸಹ ಯುರೇನಿಯಂ ನಿಕ್ಷೇಪಗಳು ಪತ್ತೆಯಾಗುತ್ತಿವೆ.
Archives
- March 2026
- February 2026
- January 2026
- December 2025
- November 2025
- October 2025
- September 2025
- August 2025
- July 2025
- June 2025
- May 2025
- April 2025
- March 2025
- February 2025
- January 2025
- December 2024
- November 2024
- October 2024
- September 2024
- August 2024
- July 2024
- June 2024
- May 2024
- April 2024
- March 2024
- February 2024
- January 2024
- December 2023
- November 2023
- October 2023
- September 2023
- August 2023
- July 2023
- June 2023
- May 2023
- April 2023
- March 2023
- February 2023
- January 2023
- December 2022
- November 2022
- October 2022
- September 2022
- August 2022
- July 2022
- June 2022
- May 2022
- April 2022

