ನವದೆಹಲಿ: ರಾಷ್ಟ್ರದ 15ನೇ ಹಾಗು ಎರಡನೇ ಮಹಿಳಾ ರಾಷ್ಟ್ರಪತಿಯಾಗಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು 5,77,777 ಮತ ಗಳಿಸುವ ಮೂಲಕ ಆಯ್ಕೆಯಾಗಿದ್ದಾರೆ. ಈ ಮೂಲಕ ಬುಡಕಟ್ಟು ಜನಾಂಗಕ್ಕೆ ಸೇರಿದ ಮೊದಲ ಮಹಿಳೆ ದೇಶದ ರಾಷ್ಟ್ರಪತಿ ಗದ್ದುಗೆ ಏರಿದಂತಾಗಿದೆ.
ಈವರೆಗೂ ದೇಶದ ಬಹುತೇಕರಿಗೆ ಅಜ್ಞಾತವಾಗಿಯೇ ಉಳಿದು, ತಮ್ಮ ಕಷ್ಟ ಪರಂಪರೆಗಳ ಹೊರತಾಗಿಯೂ ಸಾಮಾಜಿಕ ಹೋರಾಟಗಳ ಮೂಲಕ ಮಹಿಳಾ ಮುತ್ಸದ್ದಿಯೆನಿಸಿ ಈಗ ರಾಷ್ಟ್ರಪತಿ ಪದವಿ ಅಲಂಕರಿಸಿದ್ದಾರೆ.
ಸಂಸತ್ ಭವನದಲ್ಲಿ ನಡೆದ ಮತ ಎಣಿಕೆ ಕಾರ್ಯದಲ್ಲಿ ಮೊದಲಿನಿಂದಲೂ ದ್ರೌಪದಿ ಮುರ್ಮು ವಿಪಕ್ಷಗಳ ಅಭ್ಯರ್ಥಿಯಾಗಿರುವ ಯಶವಂತ್ ಸಿನ್ಹಾರಿಂದ ಮುನ್ನಡೆಯನ್ನು ಕಾಯ್ದುಕೊಂಡು ಬಂದಿದ್ದರು. ಮತ ಎಣಿಕೆ ಕಾರ್ಯ ಅಂತ್ಯಗೊಳ್ಳುವ ವೇಳೆಗೆ ಯಶವಂತ್ ಸಿನ್ಹಾರಿಂದ ಮತಗಳ ಅಂತರದಲ್ಲಿ ದ್ರೌಪದಿ ಮುರ್ಮು ಜಯಭೇರಿ ಬಾರಿಸಿದ್ದಾರೆ.
ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆದಿದ್ದು ಇಂದು(ಗುರುವಾರ) ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ಆರಂಭವಾಗಿತ್ತು. ರಾಷ್ಟ್ರಪತಿ ಚುನಾವಣೆಯ ಮೊದಲ ಸುತ್ತಿನ ಮತ ಎಣಿಕೆಯಲ್ಲಿಯೇ ಮುರ್ಮ ಮುನ್ನಡೆ ಸಾಧಿಸಿದ್ದರು.
Previous Articleನನಗೆ ಕ್ಯಾನ್ಸರ್ ಇದೆ ಎಂದ ಅಮೆರಿಕ ಅಧ್ಯಕ್ಷ ಜೋ ಬಿಡೆನ್
Next Article ಓಮಿನಿ ಟ್ರೇಲರ್ ಬಿಡುಗಡೆ