ಸಾಯಿ ಪಲ್ಲವಿ ಅಭಿನಯದ ‘ಗಾರ್ಗಿ‘ ಸಿನಿಮಾ ಬಿಡುಗಡೆ ಆಗಿದೆ. ಚಿತ್ರ ನೋಡಿದ ಪ್ರೇಕ್ಷಕರು ಸಿನಿಮಾದ ಕುರಿತು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು, ಸಾಯಿ ಪಲ್ಲವಿ ಅವರಿಗೆ ಮತ್ತೊಂದು ಹಿಟ್ ಸಿಕ್ಕಂತಾಗಿದೆ. ಗೌತಮ್ ರಾಮಚಂದ್ರನ್ ಎರಡನೇ ಚಿತ್ರ ಗಾರ್ಗಿ, ಸಾಯಿ ಪಲ್ಲವಿ ಮಧ್ಯಮ ವರ್ಗದ ಮನೆಯ ಹಿರಿಯ ಮಗಳು. ಅವಳು ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುತ್ತಾಳೆ. ಮನೆಯ ಜವಾಬ್ದಾರಿಗಳನ್ನು ಹೊತ್ತುಕೊಳ್ಳುತ್ತಾಳೆ. ಆ ನಡುವೆ ಅವಳ ತಂದೆಯನ್ನು ಪೊಲೀಸರು ಅರೆಸ್ಟ್ ಮಾಡುತ್ತಾರೆ. ಏಕೆ ಅರೆಸ್ಟ್ ಮಾಡಿದ್ದಾರೆ ತಂದೆ ಬಿಡುಗಡೆಗೆ ಮಗಳು ಗಾರ್ಗಿ ಹೇಗೆ ಹೋರಾಟ ನಡೆಸುತ್ತಾಳೆನ್ನೋದೇ ಚಿತ್ರದ ಹೈಲೈಟ್. ‘ಕೋರ್ಟ್ ರೂಮ್ ಡ್ರಾಮಾದಲ್ಲಿ ಸಾಯಿ ಪಲ್ಲವಿ ನಟನೆ ಇಷ್ಟವಾಗುತ್ತದೆ. ನಿಧಾನಗತಿಯ ನಿರೂಪಣೆ ಇದ್ದರೂ ಚಿತ್ರಕಥೆ ಉತ್ತಮವಾಗಿದೆ. ಸಾಯಿ ಪಲ್ಲವಿ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಇಷ್ಟವಾಗುವುದು ಖಚಿತ. ಕನ್ನಡ ವರ್ಷನ್‌ನಲ್ಲಿ ಸಾಯಿ ಪಲ್ಲವಿಯವರೇ ಡಬ್ ಮಾಡಿರುವುದು ಇಲ್ಲಿನ ಅಭಿಮಾನಿಗಳಿಗೆ ಮುದ ನೀಡುತ್ತದೆ. ಅತ್ಯಾಚಾರಿ ಆರೋಪಿಯಾಗಿ ಅಭಿನಯಿಸಿರುವ ಆರ್.ಎಸ್.ಶಿವಾಜಿ ಇಷ್ಟವಾಗುತ್ತಾರೆ.
ವಕೀಲನಾಗಿ ಕಾಳಿ ವೆಂಕಟ್, ಪತ್ರಕರ್ತೆಯಾಗಿ ಐಶ್ವರ್ಯ ಲಕ್ಷ್ಮಿ, ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಂದೆಯ ಪಾತ್ರದಲ್ಲಿ ಸರವಣ್ ಅಭಿನಯಿಸಿದ್ದಾರೆ.ಹಿನ್ನೆಲೆ ಸಂಗೀತ ಮತ್ತಷ್ಟು ತೀವ್ರವಾಗಿಸಬಹುದಿತ್ತು. ಸಿನಿಮಾದಲ್ಲಿ ಬಳಸಿರುವ ಬಿಟ್ ಸಾಂಗ್‌ಗಳು ನೆನಪಿನಲ್ಲಿ ಉಳಿಯುವುದಿಲ್ಲ. ‘ಗಾರ್ಗಿ’ಯ ಪ್ರಿಯಕರನ ಪಾತ್ರ- ಹಾಗೆ ಬಂದು ಹೀಗೆ ಹೋಗುತ್ತದೆ. ಇಂತಹ ಕೆಲವು ಕೊರತೆ ಬಿಟ್ಟರೆ ‘ಗಾರ್ಗಿ’ಉತ್ತಮ ಸಿನಿಮಾ ಎಂದರೆ ತಪ್ಪಾಗಲಾರದು.