ಲಕ್ನೋ(ಉತ್ತರ ಪ್ರದೇಶ): ಇಲ್ಲಿನ ಲುಲು ಮಾಲ್ ಶುದ್ಧೀಕರಣಕ್ಕೆ ಬಂದ ಅಯೋಧ್ಯೆಯ ಪರಮಹಂಸ ಸ್ವಾಮೀಜಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ಮಾಲ್‌ನಲ್ಲಿ ನಮಾಜ್ ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಲಕ್ನೋದಲ್ಲಿ ಇತ್ತೀಚೆಗೆ ಆರಂಭಗೊಂಡಿರುವ ಲುಲು ಮಾಲ್‌ನಲ್ಲಿ ನಮಾಝ್ ಮಾಡಿದ ಸ್ಥಳ ಅಪವಿತ್ರವಾಗಿದೆ. ಅದನ್ನು ಶುದ್ಧ ಮಾಡಬೇಕು ಎಂಬ ನೆಪದಲ್ಲಿ ಸ್ವಾಮೀಜಿ ಆಗಮಿಸಿದ್ದು, ಈ ವೇಳೆ ಮಾಲ್ ಮುಂದೆ ತಡೆದ ಪೊಲೀಸರು, ಸ್ವಾಮೀಜಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ನಡುವೆ, ಲುಲು ಮಾಲ್‌ಗೆ ದೇವರ ಹೆಸರಿಡಬೇಕು ಎಂದು ಸ್ವಾಮೀಜಿ ಪಟ್ಟು ಹಿಡಿದಿದ್ದು, ಸ್ವಾಮೀಜಿಯ ವಿಚಿತ್ರ ಬೇಡಿಕೆಗೆ ಮಾಲ್‌ನ ಆಡಳಿತ ಮಂಡಳಿ ಸುಸ್ತಾಗಿದೆ. ಈ ಮೊದಲು ಇದೇ ಸ್ವಾಮೀಜಿ ತಾಜ್‌ಮಹಲ್ ಮುಂದೆ ಜಲಾಭಿಷೇಕ ಮಾಡುವ ವಿಚಾರವಾಗಿ ಹೈಡ್ರಾಮಾ ನಡೆಸಿದ್ದರು.