ಕೊಲ್ಕತ್ತಾ: ಬ್ರಹ್ಮಾಂಡ ಭ್ರಷ್ಟಾಚಾರದ ಲೋಕವನ್ನು ಅನಾವರಣಗೊಳಿಸಿರುವ ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ದಿನಕ್ಕೊಂದು ತಿರುವು ಪಡೆಯುತ್ತಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇದೀಗ ಅರ್ಪಿತಾ ಮುಖರ್ಜಿ ಎರಡನೆ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಬರೋಬ್ಬರಿ 29 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ಐದು ಕಿಲೋ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಕೊಲ್ಕತ್ತಾದ ಬೆಲ್ ಘಾರಿಯಾ ಪ್ರದೇಶದಲ್ಲಿರುವ ಪ್ಲ್ಯಾಟ್ ನಿಂದ ಈ ನಗದು ಸೀಜ್ ಮಾಡಲಾಗಿದೆ.
ಅರ್ಪಿತಾ ಮುಖರ್ಜಿ ಇದೀಗ ಬಂಧನದಲ್ಲಿರುವ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅರ್ಪಿತಾ ಮತ್ತು ಪಾರ್ಥ ಚಟರ್ಜಿ ಅವರನ್ನು ಶನಿವಾರ ಬಂಧಿಸಲಾಗಿದೆ.