ಮುಂಬೈ: ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಹೆಚ್ಚಳ ಮಾಡಿದೆ. ರೆಪೋ ದರದಲ್ಲಿ 50 ಮೂಲಾಂಕ ಹೆಚ್ಚಳವಾಗಿದ್ದು, ಶೇಕಡಾ 5.4ಕ್ಕೆ ತಲುಪಿದೆ.
ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದೇಸಾಯಿ ಈ ಮಾಹಿತಿ ನೀಡಿದ್ದಾರೆ. ಕೊರೋನಾ ಅವಧಿಯಲ್ಲಿ ಆರ್ ಬಿ ಐ, ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು.
ಜೂನ್ ತಿಂಗಳಲ್ಲಿ ರೆಪೋ ದರದಲ್ಲಿ 50 ಮೂಲಾಂಕ ಹೆಚ್ಚಳ ಮಾಡಿತ್ತು. ಇದೀಗ ಮತ್ತೊಮ್ಮೆ ರೆಪೋ ದರ ಹೆಚ್ಚಳವಾಗಿದ್ದು ಶೇಕಡಾ 5.4ಕ್ಕೆ ತಲುಪಿದೆ.
ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಸಾಲಕ್ಕೆ ವಿಧಿಸಲಾಗುತ್ತಿರುವ ಬಡ್ಡಿದರವನ್ನು ರೆಪೋ ಎಂದು ಕರಯಲಾಗುತ್ತಿದೆ. ಬ್ಯಾಂಕ್ ಗಳು ಸಾಲ ಪಡೆಯಲು ಹೆಚ್ಚಿನ ಬಡ್ಡಿ ನೀಡಬೇಕಾಗುತ್ತದೆ. ಅದೇ ಹಣವನ್ನು ಬ್ಯಾಂಕ್ ಗಳು ಗ್ರಾಹಕನಿಗೆ ನೀಡುವಾಗ ಅದಕ್ಕಿಂತ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿವೆ. ಇದರಿಂದ ಬ್ಯಾಂಕ್ ನ ಬಡ್ಡಿ ದರ ಹೆಚ್ಚಳವಾಗುತ್ತಿದೆ.