ISROದ ಅತ್ಯಂತ ಪ್ರಸಿದ್ಧ ವಿಜ್ಞಾನಿ ನಂಬಿ ನಾರಾಯಣ ಅವರಿಗೆ ಆದ ಅನ್ಯಾಯ ಮತ್ತು ಅವರ ಜೀವನ ಗಾಥೆಯನ್ನು ಆಧರಿಸಿ ಮಾಡಿದ ಚಿತ್ರ Rocketry ಅನೇಕ ಕಡೆ ಬಹಳಷ್ಟು ಪ್ರಶಂಶೆಯನ್ನು ಗಳಿಸಿದೆ. ನಂಬಿ ನಾರಾಯಣ್ ವಿರುದ್ದ ನಡೆದ ಷಡ್ಯಂತ್ರ ಮತ್ತು ಭಾರತದ ಹಿಂದಿನ ಸರ್ಕಾರಗಳ ಸಂದರ್ಭದಲ್ಲಿ ಪ್ರಖ್ಯಾತ ಮತ್ತು ಸಮರ್ಥ ವಿಜ್ಞಾನಿಗಳನ್ನು ಹೇಗೆ ನಡೆಸಿಕೊಳ್ಳಲಾಯಿತು? ಮತ್ತು ಭಾರತದಲ್ಲಿ ಒಬ್ಬ ಹಿಂದೂ ವಿಜ್ಞಾನಿ ಯಾವ ರೀತಿಯಲ್ಲಿ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾಯಿತು? ಎನ್ನುವುದನ್ನು ವಿಜೃಂಭಿಸಿ ತೋರಿಸಿದ Rocketry ಸಿನೆಮದಲ್ಲಿ ನಂಬಿ ನಾರಾಯಣ್ ಪಾತ್ರವನ್ನು ಮಾಡಿದ ಮಾಧವನ್ ಅವರು ಪ್ರಶಂಸೆಯನ್ನು ಗಳಿಸಿರುವುದು ಈಗಾಗಲೇ ಸಾಕಷ್ಟು ವರಿದಯಾಗಿದೆ. ಆದರೆ ಇಸ್ರೋ ಗೂಡಾಚಾರಿಕೆ ಕೇಸ್ ನಲ್ಲಿ ನಂಬಿ ನಾರಾಯಣ್ ಅವರೊಂದಿಗೆ ಬಂಧನಕ್ಕೊಳಗಾದ ಇನ್ನೊಬ್ಬ ಪ್ರಖ್ಯಾತ ವಿಜ್ಞಾನಿ ಶಶಿಕುಮಾರ್ ಅವರು ಇತ್ತೀಚೆಗೆ ಕೇರಳದ ಮಾತೃಭೂಮಿ ಪತ್ರಿಕೆಗೆ ಸಂದರ್ಶನವನ್ನು ನೀಡಿ ಅದರಲ್ಲಿ Rocketry ಸಿನೆಮದಲ್ಲಿ ತೋರಿಸಿದ್ದೆಲ್ಲವೂ ಸತ್ಯಕ್ಕೆ ಬಹಳ ದೂರ ಎಂದು ಹೇಳಿದ್ದಾರೆ. ಹಾಗೆಯೇ ನಂಬಿ ನಾರಾಯಣ್ ಅವರು ಸತ್ಯವನ್ನು ತಿರುಚುವುದರಲ್ಲಿ ಪರಿಣಿತರು ಮತ್ತು ಅವರನ್ನು ಗೊತ್ತಿರುವವರಿಗೆ ಯಾವ ರೀತಿಯಲ್ಲಿ ನಂಬಿ ನಾರಾಯಣ್ ಸತ್ಯವನ್ನು ತಿರುಚುತ್ತಾರೆ ಎಂಬುದೂ ಗೊತ್ತಿದೆ ಎಂದು ಹೇಳಿದ್ದಾರೆ.
ನಂಬಿ ನಾರಾಯಣ್ ಅವರು ತಾವು ಇಸ್ರೋದಲ್ಲಿ ಸೇವೆ ಸಲ್ಲಿಸಲು ಆರಂಭಿಸಿದ ಮೊದಲಿನಲ್ಲಿ ಕಲಾಂ ಅವರ ತಂಡದಲ್ಲಿ ಓರ್ವ ಸಹಾಯಕ ವಿಜ್ಞಾನಿಯಾಗಿ ಕೆಲಸ ಮಾಡಿದ್ದರೇ ವಿನಃ ಆನಂತರ ಅವರೆಂದೂ ಕಲಾಂ ಅವರೊಂದಿಗೆ ಕೆಲಸ ಮಾಡಿಲ್ಲ ಎಂದು ಹೇಳುವುದರೊಂದಿಗೆ ನಂಬಿ ನಾರಾಯಣ್ ಅವರು ಯಾವುದೇ ಒಂದು ಹೆಸರುವಾಸಿಯಾದ ಯೋಜನೆಯನ್ನು ಮಾಡಿಲ್ಲ, ಅವರು ಯಾವುದೇ ಒಂದು ಹೆಗ್ಗಳಿಕೆಗೂ ಪಾತ್ರವಾಗಿಲ್ಲ. ಹಾಗೆಯೇ ಅವರು ಮಾಡಿದ್ದರೆನ್ನಲಾದ ಎಲ್ಲಾ ಸಾಧನೆಗಳು ಕೂಡ ಬೇರೆಯವರು ಮಾಡಿರತಕ್ಕಂತದ್ದು ಎಂದಿದ್ದಾರೆ.
ಭಾರತದಲ್ಲಿ ಅಪಾತ್ರರಿಗೆ ಎಲ್ಲವೂ ಸಿಗುವಂತದ್ದು ಮತ್ತು ಯೋಗ್ಯರಿಗೆ ಅದ್ಯಾವುದೂ ಸಿಗುವುದಿಲ್ಲ ಎನ್ನುವುದು ಸಾಭೀತಾಗಿರುವಂತೆ, ಈ ನಂಬಿ ನಾರಾಯಣ್ ಅವರ ವಿಚಾರದಲ್ಲಿ ಕೂಡ ಅವರಿಗಿಂತಲೂ ಸಾಧನೆ ಮಾಡಿದವರು ಏನನ್ನೂ ಬಯಸದೆ ನಂಬಿ ನಾರಾಯಣ್ ಅಂಥವರು ಏನೂ ಮಾಡದೆಯೂ ಇಷ್ಟೊಂದು ಹೆಗ್ಗಳಿಕೆಗೆ ಪಾತ್ರರಾಗಿರುವುದು ಆಶ್ಚರ್ಯವೇನಿಲ್ಲ ಎಂದಿದ್ದಾರೆ. Rocketry ಸಿನೆಮದಲ್ಲಿ ಸತ್ಯಕ್ಕಿಂತ ಸುಳ್ಳೇ ಹೆಚ್ಚು ಮತ್ತು ಈ ರೀತಿ ಸುಳ್ಳುಗಳು ಬಿಂಬಿತವಾಗಿರುವುದು ಇಸ್ರೋದಲ್ಲಿ ಸಾಧನೆ ಮಾಡಿರತಕ್ಕಂತಹ ಇತರ ವಿಜ್ಞಾನಿಗಳಿಗೆ ಮಾಡಿರುವ ಅಪಚಾರವೆಂದೂ ಅವರು ಹೇಳಿದ್ದಾರೆ.
ನಂಬಿ ನಾರಾಯಣ್ ಗಿಂತ ಹೆಚ್ಚು ನಾನೇ ಜೈಲುವಾಸವನ್ನು ಅನುಭವಿಸಿದ್ದೇನೆ. ಜೈಲಿನಲ್ಲಿ ಪೊಲೀಸರು ನಮಗ್ಯಾರಿಗೂ ಹೊಡೆದಿಲ್ಲ ಹಾಗು ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡರು ಮತ್ತು ಆನಂತರ ಕೇಸ್ ಸಿಬಿಐಗೆ ಹೋಗಿರುವುದರಿಂದ ಪೊಲೀಸರು ಎಲ್ಲಿ ನಮ್ಮನ್ನು ಹೊಡೆದರು ? ಎಂದು ಪ್ರಶ್ನಿಸಿದ್ದಾರೆ. ನಂಬಿ ನಾರಾಯಣ್ ಪರಿಹಾರ ಹಣ ಪಡೆದರು. ನನಗೆ ಅಂತಹ ಹಣ ಬೇಡ, ನಾನು ನನ್ನ ಕೇಸ್ ಅನ್ನು ಸ್ವತಃ ವಾದ ಮಾಡಿ ಹೊರಬಂದಿದ್ದೇನೆ. ನನಗೆ ಜನರ ತೆರಿಗೆಯ ದುಡ್ಡು ಬೇಡ ಎಂದೂ ಹೇಳಿದ್ದಾರೆ.
ನಂಬಿ ನಾರಾಯಣ್ ಬಗ್ಗೆ ತೋರಿಸಿರುವುದೆಲ್ಲ ಬರೀ ಕಟ್ಟುಕತೆ ಮತ್ತು ಅದು ನಂಬಲು ಸಾಧ್ಯವೇ ಇಲ್ಲದಂತ ವಿಚಾರ ಎಂದು ಶಶಿಕುಮಾರ್ ಖಡಾಖಂಡಿತವಾಗಿ ಹೇಳಿದ್ದಾರೆ. ಮಾತೃಭೂಮಿ ಕೇರಳದ ಪ್ರಖ್ಯಾತ ಮತ್ತು ವಿಶ್ವಸನೀಯ ದಿನಪತ್ರಿಕೆ ಎಂಬುದನ್ನು ಇಲ್ಲಿ ಗಮನದಲ್ಲಿಡಬಹುದು.