ನವದೆಹಲಿ : ಅಬಕಾರಿ ಗುತ್ತಿಗೆ ನೀತಿ ಅಕ್ರಮ ಆರೋಪದಡಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿವಾದದ ಬಾಂಬ್ ಸಿಡಿಸಿದ್ದಾರೆ.
ತಮಗೆ ಬಿಜೆಪಿ ಸೇರುವಂತೆ ಆಹ್ವಾನ ನೀಡಲಾಗಿತ್ತು. ಬಿಜೆಪಿ ಸೇರಿದರೆ, ಸಿಬಿಐ, ಜಾರಿ ನಿರ್ದೇಶನಾಲಯ
ದಾಖಲಿಸಿಕೊಂಡಿರುವ ಎಲ್ಲ ಪ್ರಕರಣಗಳನ್ನು ಕೈಬಿಡುವುದಾಗಿ ಆ ಪಕ್ಷದವರು ಆಮಿಷವೊಡ್ಡಿದ್ದರು ಎಂದು ಹೇಳಿದ್ದಾರೆ.
ನಾನು ಮಹಾರಾಣಾ ಪ್ರತಾಪ್‌ನ ವಂಶಸ್ಥ, ನಾನು ರಜಪೂತ. ತಲೆಯನ್ನು ಕತ್ತರಿಸಿ ಹಾಕಿದರೂ ಭ್ರಷ್ಟರು ಮತ್ತು ಪಿತೂರಿಗಾರರ ಜತೆ ಸೇರುವುದಿಲ್ಲ. ನನ್ನ ವಿರುದ್ಧದ ಪ್ರಕರಣಗಳೆಲ್ಲವೂ ಸುಳ್ಳು. ಏನು ಬೇಕಾದರೂ ಮಾಡಿಕೊಳ್ಳಿ ಎಂಬುದಾಗಿ ಬಿಜೆಪಿ ಸಂದೇಶಕ್ಕೆ ಉತ್ತರಿಸಿದ್ದೇನೆ’ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
Previous Articleಬಿಜೆಪಿಯಿಂದ ಬಂಡವಾಳ ಹೂಡಿಕೆಗೆ ಅಡ್ಡಿ..
Next Article ಹಂದಿಮಾಂಸ ತಿಂದು ಹೋಗಿ ನೋಡೋಣಾ…!!