ಲಂಡನ್: ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರನ್ನು ಬೆಟರ್ ಹಾಫ್ ಎಂದು ಪರಿಚಯಿಸಿರುವುದು ಹಲ್‌ಚಲ್ ಸೃಷ್ಟಿಸಿದೆ.
ನಾನು ಈಗಾಗಲೇ ಸುಶ್ಮಿತಾ ಸೇನ್ ಜೊತೆ ಮಾಲ್ಡೀವ್ಸ್ ಸೇರಿದಂತೆ ಹಲವು ದೇಶಗಳಿಗೆ ಪ್ರವಾಸ ಕೈಗೊಂಡಿದ್ದೇನೆ ಎಂದು ಲಲಿತ್ ಮೋದಿ ಹೇಳಿದ್ದಾರೆ.
ಇದೇ ವೇಳೆ ಸ್ಪಷ್ಟೀಕರಣ ಕೂಡ ನೀಡಿರುವ ಲಲಿತ್ ಮೋದಿ, ಇನ್ನೂ ಮದುವೆಯಾಗಿಲ್ಲ. ಡೇಟಿಂಗ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಐಪಿಎಲ್ ಪರಿಚಯಿಸಿದ ಕೀರ್ತಿ ಲಲಿತ್ ಮೋದಿಯವರದ್ದಾಗಿದೆ. ಬಳಿಕ ಹಗರಣದಲ್ಲಿ ಅವರ ಹೆಸರು ಕೇಳಿ ಬಂದಿತ್ತು.
ಫೆಮಿನಾ ಮಿಸ್ ಇಂಡಿಯಾ, ಮಿಸ್ ಯೂನಿವರ್ಸ್ ಪಟ್ಟ ತಮ್ಮದಾಗಿಸಿಕೊಂಡಿರುವ ನಟಿ ಸುಶ್ಮಿತಾ ಸೇನ್ ಇತ್ತೀಚೆಗೆ ಕಾಶ್ಮೀರಿ ಮೂಲದ ನಟನ ಜತೆಗಿನ ಸಂಬಂಧವನ್ನು ಕೊನೆಗೊಳಿಸಿದ್ದರು.