ಮ್ಯಾಗಝಿನ್ ಒಂದಕ್ಕೆ ನಗ್ನ ಫೋಟೋಶೂಟ್ ಮಾಡುವ ಮೂಲಕ ವಿವಾದಕ್ಕೆ ಒಳಗಾದ ರಣವೀರ್ ಸಿಂಗ್ ಮಹಿಳೆಯರ ಭಾವನೆಗೆ ದಕ್ಕೆ ತಂದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು FIR ದಾಖಲಾಗುವ ತನಕವೂ ಅದು ತಲುಪಿದೆ. ಆದರೆ ಈಗ ದಕ್ಷಿಣ ಕನ್ನಡದ ನಿರ್ದೇಶಕ ರಾಮ್ ಗೋಪಾಲ್ ವರ್ಮ ‘ಮತ ಚಲಾಯಿಸಲು ಮಹಿಳೆಯರು ದಶಕಗಳ ಕಾಲ ಕಾಯಬೇಕಾಯಿತು. ಅದೇ ರೀತಿ ಪುರುಷನ ಬೆತ್ತಲೆ ಫೋಟೋವನ್ನು ನೋಡಲು ಮಹಿಳೆಯರು ಯಾಕೆ ಕಾಯಬೇಕು? ಗಂಡಸರು ದಶಕಗಳಿಂದಲೂ ಮಹಿಳೆಯರ ಬೆತ್ತಲೆ ಫೋಟೋ ನೋಡುತ್ತಿದ್ದಾರೆ. ರಣವೀರ್ ಸಿಂಗ್ ಅವರಿಂದ ಸ್ತ್ರೀಯರ ಭಾವನೆಗೆ ಧಕ್ಕೆ ಆಗಿದೆ ಎಂಬ ಆರೋಪ ಇದೆ. ಆದರೆ ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿಯುವ ವ್ಯಕ್ತಿಯಾಗಿ ರಣವೀರ್ ಸಿಂಗ್ ಅವರನ್ನು ನಾನು ನೋಡುತ್ತೇನೆ’ ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ವಾದವನ್ನು ಮಂಡಿಸಿದ್ದಾರೆ.
ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿಯುವ ವ್ಯಕ್ತಿ ರಣವೀರ್ ಸಿಂಗ್ : ರಾಮ್ ಗೋಪಾಲ್ ವರ್ಮ
Previous Articleಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಗುಂಡಿನ ಕಾಳಗ
Next Article ಪೌರಕಾರ್ಮಿಕರ ಹಿತರಕ್ಷಣೆಗಾಗಿ ಆಯೋಗ ಸದಾಸಿದ್ಧ