ವಿಕ್ರಾಂತ್ ರೋಣ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಜಾ್ಕ್ವೆಲಿನ್ ಫೆರ್ನಾಂಡಿಸ್ ಒಂದು ದಿನದ ಬ್ರೇಕ್ ತೆಗೆದುಕೊಂಡು ಜಾರಿ ನಿರ್ದೇಶನಾಲಯದ ತನಿಖೆಗೆ ಹಾಜರಾಗಿದ್ದಾರೆ. ಉದ್ಯಮಿಗಳಿಗೆ 200ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ನಿರಂತರವಾಗಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರ ಸಂಪರ್ಕದಲ್ಲಿದ್ದರು. ಇಷ್ಟಲ್ಲದೆ ಸುಕೇಶ್ ಅವರಿಂದ ದುಬಾರಿ ಗಿಫ್ಟ್ ಗಳನ್ನು ಸಹ ಪಡೆದಿದ್ದರು. ಇದರಿಂದ ಜಾಕ್ವೆಲಿನ್ ಮೇಲೆ ಕಣ್ಣಿಟ್ಟಿದ್ದ ಜಾರಿ ಹಲವಾರು ಬಾರಿ ತನಿಖೆಗೆ ಕರೆದಿತ್ತು. ಕಳೆದ ವರ್ಷ ಸುಕೇಶ್ ಜಾಕ್ವೆಲಿನ್ ಅವರೊಂದಿಗಿನ ಖಾಸಗಿ ಫೋಟೊಗಳನ್ನು ಲೀಕ್ ಮಾಡಿದ್ದ. ಇದರಿಂದ ಮುಜುಗರಗೊಂಡ ನಟಿ ತನಗೆ ಆತ ಉದ್ಯಮಿಯಾಗಷ್ಟೇ ಪರಿಚಯ. ಬೇರೆ ಇನ್ನೇನು ಸಂಬಂಧವಿಲ್ಲ ಎಂದು ಹೇಳಿದ್ದರು. ಕಳೆದ ಎಪ್ರಿಲ್ ತಿಂಗಳಿನಲ್ಲಿ ಜಾಕ್ವೆಲಿನ್ ಅವರಿಗೆ ಸಂಬಂಧಪಟ್ಟ 7 .12 ಕೋಟಿ ಎಫ್ ಡಿ ಹಾಗು 15 ಲಕ್ಷ ಕ್ಯಾಶ್ ಅನ್ನು ಮುಟ್ಟಗೋಲು ಹಾಕಿತ್ತು. ಆದರೆ ಇದೀಗ ಮತ್ತೆ ವಿಚಾರಣೆಗೆ ಒಳಪಟ್ಟ ಜಾಕ್ವೆಲಿನ್ ಸೋಮವಾರ ನವದೆಹಲಿಗೆ ತೆರಳಿ ಇಡಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ಜುಲೈ 28ಕ್ಕೆ ತೆರೆ ಕಾಣುತ್ತಲಿದ್ದು, ಜಾಕ್ವೆಲಿನ್ ಫೆರ್ನಾಂಡಿಸ್ ಅವರ ಮೊಟ್ಟ ಮೊದಲ ಕನ್ನಡ ಸಿನಿಮಾವಾಗಿದೆ.
ವಿಕ್ರಾಂತ್ ರೋಣ ಸಿನಿಮಾ ನಾಯಕಿ ಜಾಕ್ವೆಲಿನ್ ಫೆರ್ನಾಂಡಿಸ್ ಗೆ ಜಾರಿ ನಿರ್ದೇಶನಾಲಯ ತನಿಖೆ
Previous Articleಕಿಚ್ಚನ ವಿಕ್ರಾಂತ್ ರೋಣಗೆ ಶುಭ ಕೋರಿದ ಬಿಗ್ ಬಿ
Next Article ಅತ್ಯಾಚಾರ ಪ್ರಕರಣ: ನಟ-ನಿರ್ಮಾಪಕ ವಿಜಯ್‌ಬಾಬು ಅರೆಸ್ಟ್