ಚೆನ್ನೈ: ಜಾರಿ ನಿರ್ದೇಶನಾಲಯ ಮತ್ತು ಮಾದಕ ವಸ್ತು ನಿಗ್ರಹದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ತಮಿಳು ಸಿನಿಮಾ ನಿರ್ಮಾಪಕ ಹಾಗೂ ಡಿಎಂಕೆ ಮುಖಂಡ ಜಾಫರ್ ಸಾಧಿಕ್ (Jaffer Sadiq) ನನ್ನು ಬಂಧಿಸಿದೆ. ಈ ಮೂಲಕ ಸುಮಾರು 2000 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಮಾದಕ ದ್ರವ್ಯ ಸಾಗಾಣಿಕೆ ಜಾಲ ಬೆಳಕಿಗೆ ಬಂದಿದೆ.
ಭಾರತ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ನಡೆದಿದೆ ಎನ್ನುವುದು ಸುಮಾರು 2000 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ಸಾಗಾಣಿಕೆ ಮತ್ತು ಮಾರಾಟ ಜಾಲದ ಪ್ರಮುಖ ರೂವಾರಿ ಜಾಫರ್ ಸಾಧಿಕ್ ಎನ್ನಲಾಗಿದೆ.
ಮಾದಕ ವಸ್ತು ನಿಗ್ರಹಣ ಜಾಲ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ ಜಾಗ್ವಾರ್ ಸಾಧಿಕ್ 3500 ಕೆಜಿ ಸೂಡೋ ಫೆಡ್ರಿನ್ ಎಂಬ ಮಾದಕ ವಸ್ತು ಹೊಂದಿದ್ದು ಇದನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಗಳಿಂದ ತರಿಸಿಕೊಂಡು ಜಗತ್ತಿನ ಇತರೆ ರಾಷ್ಟ್ರಗಳಿಗೆ ರವಾನೆ ಮಾಡುತ್ತಿದ್ದರು ಎಂದು ಹೇಳಿದೆ ಇದಲ್ಲದೆ ಇವರ ಬಳಿ 180 ಕೋಟಿ ರೂಪಾಯಿ ಮೌಲ್ಯದ ಮೆಥಂ ಪೆಟಮಿನ್ ಎಂಬ ನಿಶಿದ್ಧ ಮಾದಕ ವಸ್ತು ಇತ್ತು ಎಂದು ಹೇಳಲಾಗಿದೆ.
ಈ ಎಲ್ಲಾ ಖಚಿತ ಮಾಹಿತಿಯನ್ನು ಆದರಿಸಿ ತನಿಖಾ ತಂಡಗಳು ಇವರ ಬಂಧನಕ್ಕೆ ಬಲೆ ಬೀಸಿದ್ದವು. ಆದರೆ ಈತ ಕಳೆದ ನಾಲ್ಕು ತಿಂಗಳಿನಿಂದ ತಲೆಮರಸಿಕೊಂಡಿದ್ದ. ಈತ ಚೆನ್ನೈನಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿ ಆಧರಿಸಿ ಬಂಧಿಸಿದೆ. ಈ ಬಂಧನದ ಮೂಲಕ ಮತ್ತಷ್ಟು ಕುಳಗಳು ಬಲೆಗೆ ಬೀಳುವ ಸಾಧ್ಯತೆ ಇದೆ.
ಸಾದಿಕ್ ಚಿತ್ರರಂಗದ ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮಿಯೂ ಆಗಿದ್ದಾರೆ. ಅವರು ಇದುವರೆಗೆ ನಾಲ್ಕು ಸಿನಿಮಾ ಮಾಡಿದ್ದಾರೆ. ಇರೈವನ್ ಮಿಗ ಪೆರಿಯವನ್, ಮಾಯಾವಲೈ ಮತ್ತು ಮಂಗೈ ಈ ಮೂರು ಚಿತ್ರಗಳು ಬಿಡುಗಡೆಯಾಗಿವೆ. ಅವರ ನಾಲ್ಕನೇ ಚಿತ್ರ VR07 ಈ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.
2010ರಲ್ಲಿ ಜಾಫರ್ ರಾಜಕೀಯ ಪ್ರವೇಶಿಸಿದ್ದರು. ಅವರು ಡಿಎಂಕೆಯ ಎನ್‌ಆರ್‌ಐ ವಿಭಾಗದ ಚೆನ್ನೈ ವೆಸ್ಟ್ ಉಪ ಸಂಘಟಕರಾಗಿದ್ದರು. ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಾದಿಕ್ ಅವರನ್ನು ಕಳೆದ ತಿಂಗಳು ಡಿಎಂಕೆಯಿಂದ ಉಚ್ಛಾಟಿಸಲಾಗಿತ್ತು. ಬಿಜೆಪಿ ರಾಜ್ಯ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ರಾಜ್ಯ ಸಚಿವ ಉದಯನಿಧಿ ಸ್ಟಾಲಿನ್ ಸೇರಿದಂತೆ ಹಲವು ರಾಜಕಾರಣಿಗಳೊಂದಿಗೆ ಜಾಫರ್ ಅವರ ಫೋಟೋಗಳನ್ನು ಹಂಚಿಕೊಂಡಿದ್ದರು.