ಬೆಂಗಳೂರು,ನ.17- ಚಿನ್ನಾಭರಣ ಮಾಲೀಕರಿಂದ ಕಳವು ಮಾಡಿದ ಬೀಗದ ಕೈಗಳನ್ನು ಬಳಸಿ ಸಂಚು ರೂಪಿಸಿ ಜ್ಯುವೆಲರಿ ಶಾಪ್ಗೆ ನುಗ್ಗಿ ಪುರಾತನ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಕೆಲಸಗಾರ ಸೇರಿ ಇಬ್ಬರು ಖತರ್ನಾಕ್ ಖದೀಮರನ್ನು ಬಂಧಿಸುವಲ್ಲಿ ಹಲಸೂರು ಗೇಟ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಲಸಗಾರ ರಾಜಸ್ಥಾನ ಮೂಲದ ಕೇತರಾಮ್ ಹಾಗೂ ಆತನ ಸ್ನೇಹಿತ ರಾಕೇಶ್ ಬಂಧಿತ ಆರೋಪಿಳಾಗಿದ್ದು ಇವರಿಂದ 15 ಲಕ್ಷದ 50 ಸಾವಿರ ನಗದು,1 ಕೋಟಿ 2 ಲಕ್ಷ ಮೌಲ್ಯದ 1 ಕೆಜಿ 624 ಗ್ರಾಂ ಚಿನ್ನ ಮತ್ತು 6 ಕೆಜಿ455 ಗ್ರಾಂ ಬೆಳ್ಳಿ, ಹಳೆಯ ನೋಟುಗಳು, ಕೈ ಗಡಿಯಾರಗಳು ಮತ್ತು ಸ್ಕೂಟರ್ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹಲಸೂರುಗೇಟ್ ನ ನಗರ್ತ ಪೇಟೆಯ ಕಾಂಚನಾ ಜ್ಯುವೆಲರ್ಸ್ ಮಾಲೀಕ ಅರವಿಂದ್ ಕುಮಾರ್ ಥಾಡೆ ಅವರ ಮನೆ ಕೆಲಸಗಾರನಾಗಿ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಪ್ರಮುಖ ಆರೋಪಿ ಕೇತರಾಮ್ ಸೇರಿಕೊಂಡಿದ್ದನು. ತನ್ನ ಮಾಲೀಕನೊಂದಿಗೆ ಒಳ್ಳೆಯವನಂತೆ ನಟಿಸುತ್ತಿದ್ದ ಆತ ಅಲ್ಲಿನ ಆರ್ಥಿಕ ವ್ಯವಹಾರಗಳನ್ನೆಲ್ಲಾ ಅರಿತುಕೊಂಡಿದ್ದ.
ಈ ನಡುವೆ ದಸರಾ ಹಬ್ಬ ಹಿನ್ನೆಲೆ ಅರವಿಂದ್ ಕುಮಾರ್ ಅವರು ಮುಂಬಯಿಗೆ ತೆರಳಿದರು. ಈ ಸಂದರ್ಭದಲ್ಲಿ ಸಮಯ ಸಾಧಿಸಿದ ಕೇತರಾಮ್ ತಮ್ಮ ಮಾಲೀಕರ ಬ್ಯಾಗ್ನಲ್ಲಿದ್ದ ಬೀಗದ ಕೀಲಿಗಳನ್ನು ಕಳವು ಮಾಡಿದ್ದಾನೆ. ಬಳಿಕ ತನ್ನದೇ ಊರಿನ ರಾಕೇಶ್ ಎಂಬಾತನನ್ನು ಕರೆಸಿಕೊಂಡು ಕಳೆದ ಅ.29ರ ರಾತ್ರಿ ಮಾಲೀಕನ ಜ್ಯುವೆಲ್ಲರಿ ಅಂಗಡಿ ಬೀಗ ತೆರೆದು ಒಳಗೆ ನುಗ್ಗಿದ್ದಾರೆ.
ಜ್ಯುವೆಲರ್ಸ್ ನಲ್ಲಿದ್ದ ಕೆಜಿಗಟ್ಟಲೇ ಚಿನ್ನ,ಬೆಳ್ಳಿ,ಪುರಾತನ ಆಭರಣಗಳು ನಗದು ದೋಚಿ ಪರಾರಿಯಾಗಿದ್ದರು.
ಈ ಬಗ್ಗೆ ಸ್ಥಳೀಯರು ಅರವಿಂದ್ ಅವರ ಪುತ್ರನಿಗೆ ಮಾಹಿತಿ ನೀಡಿದ್ದು,ಕೂಡಲೇ ಅರವಿಂದ್ ಪುತ್ರ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಇನ್ಸ್‌ಪೆಕ್ಟರ್ ಹನುಮಂತ ಕೆ. ಭಜಂತ್ರಿ ರವರ ನೇತೃತ್ವದ ತಂಡ ಆರೋಪಿಗಳನ್ನು ರಾಜಸ್ಥಾನದಲ್ಲಿ ಬಂಧಿಸಿ ಕರೆತಂದು ವಿಚಾರಣೆ ನಡೆಸಿದ್ದು,ಕೃತ್ಯದಲ್ಲಿ ಭಾಗಿಯಾಗಿರುವ ಮತ್ತೊಬ್ಬನ ಬಂಧನಕ್ಕೆ ತೀವ್ರ ಶೋಧ ಕೈಗೊಂಡಿದ್ದಾರೆ ಎಂದರು.
ಬಂಧಿತ ಕೇತರಾಮ್ ವಿರುದ್ಧ ಸಿಟಿ ಮಾರ್ಕೆಟ್, ಹಲಸೂರು, ವರ್ತೂರು, ಬ್ಯಾಡರಹಳ್ಳಿ, ತಾವರೆಕೆರೆ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆ, ಮನೆ ಕಳುವು, ಹಗಲು ಕನ್ನ ಕಳುವು ಪ್ರಕರಣಗಳು ದಾಖಲಾಗಿದ್ದು ಆತ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು,ಮತ್ತೆ ಕೃತ್ಯ ನಡೆಸಿದ್ದಾನೆ ಎಂದು ತಿಳಿಸಿದರು.
5 Comments
электрокарнизы купить в москве электрокарнизы купить в москве .
снятие ломки наркомана снятие ломки наркомана .
проститутки центр москвы проститутки центр москвы .
купить старый диплом техникума купить старый диплом техникума .
Официальная покупка диплома вуза с сокращенной программой обучения в Москве