ಬೆಂಗಳೂರು, ಜೂ. 29-ಜೀವನೋಪಾಯಕ್ಕೆ ಅಮೇಜಾನ್ ನಲ್ಲಿ ಕೆಲಸ ಮಾಡುತ್ತಾ ಶೋಕಿ
ಜಾಲಿ ರೈಡ್ ಗಾಗಿ ಬೈಕ್ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ರಾಜಾಜಿನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಡಿಗೇಹಳ್ಳಿಯ ಸಾಗರ್( 22) ಬಂಧಿತ ಆರೋಪಿಯಾಗಿದ್ದು ಆತನಿಂದ 11.6 ಲಕ್ಷ ಮೌಲ್ಯದ 8 ದ್ವಿಚಕ್ರವಾಹನಗನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಕಳೆದ ಮಾ.15 ರಂದು ಬೆಳಗ್ಗೆ ರಾಜಾಜಿನಗರದ 3ನೇ ಬ್ಲಾಕ್, ಕರಿಗರಿ ಬೇಕರಿ ಮುಂದೆ ನಿಲ್ಲಿಸಿದ ಹೋಂಡಾ ಆಕ್ಟಿವಾ ಸ್ಕೂಟರ್ ಕಳವು ಮಾಡಿದ ಪ್ರಕರಣ ದಾಖಲಿಸಿದ ರಾಜಾಜಿನಗರ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಪಿ. ಅಶೋಕ್ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯು 2020ರ ನವೆಂಬರ್ ನಲ್ಲಿ ಶಿಡ್ಲಘಟ್ಟದಲ್ಲಿ ದ್ವಿಚಕ್ರವಾಹನ ಕಳವು ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದು ಅಮೇಜಾನ್ ಕಂಪನಿಯಲ್ಲಿ ಸೂಪರ್ ವೈಸರ್ ಕೆಲಸ ಮಾಡಿಕೊಂಡಿದ್ದು ರಾತ್ರಿ ಹಗಲು ಸಮಯದಲ್ಲಿ ಮನೆ ಮತ್ತು ಪಿ.ಜಿ.ಗಳ ಮುಂದೆ ನಿಲ್ಲಿಸುವ ದ್ವಿಚಕ್ರವಾಹನಗಳನ್ನು ಗಮನಿಸಿಕೊಂಡು ನಕಲಿ ಕೀಗಳನ್ನು ಬಳಸಿ ಕಳ್ಳತನ ಮಾಡುತ್ತಿದ್ದು, ಕಳವು ಮಾಡಿದ ದ್ವಿಚಕ್ರವಾಹನಗಳನ್ನು ಜಾಲಿ ರೈಡ್‍ಗಾಗಿ ಬಳಸಿ ಇಂಧನ ಖಾಲಿಯಾದಾಗ ತನ್ನ ಮನೆಯ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ನಿಲ್ಲಿಸುವುದು ತನಿಖೆಯಿಂದ ತಿಳಿದು ಬಂದಿದೆ.
ಆರೋಪಿಯ ಬಂಧನದಿಂದ ರಾಜಾಜಿನಗರ-2, ಯಲಹಂಕ-4, ಕೊಡಿಗೇಹಳ್ಳಿ-1, ವಿದ್ಯಾರಣ್ಯಪುರ-1 ದ್ವಿಚಕ್ರವಾಹನ ಕಳವು ಪ್ರಕರಣ ಸೇರಿ ಒಟ್ಟು 8 ದ್ವಿಚಕ್ರವಾಹನ ಕಳವು ಪ್ರಕರಣಗಳು ಪತ್ತೆಯಾಗಿದೆ ಎಂದರು.
Previous Articleತೆರೆ ಮೇಲೆ ವಾಜಪೇಯಿ ಬಯೋಪಿಕ್
Next Article ಇಳಿ ವಯಸ್ಸಲ್ಲೂ ಕಮಲ್ ಹಾಸನ್ ಪುಶಪ್ಸ್!