ನವದೆಹಲಿ – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅತ್ಯಂತ ಪ್ರಭಾವಿ ರಾಜಕಾರಣಿ ಜಡ್ ಶ್ರೇಣಿಯ ಭದ್ರತೆ ಹೊಂದಿರುವ ನಾಯಕ. ಈ ನಾಯಕರ ಕುಟುಂಬದವರಿಗೂ ಅಷ್ಟೇ ಪ್ರಮಾಣದ ಭದ್ರತೆಯನ್ನು ಒದಗಿಸಲಾಗಿದೆ.
ಜೆಪಿ ನಡ್ಡಾ ಮತ್ತು ಅವರ ಕುಟುಂಬ ಸದಸ್ಯರು ಹೊರಗಡೆ ಎಲ್ಲಿಯೇ ಹೋದರು ಅವರ ಜೊತೆಗೆ ಶಸ್ತ್ರ ಸಜ್ಜಿತ ಭದ್ರತಾ ಸಿಬ್ಬಂದಿ ಇದ್ದೇ ಇರುತ್ತಾರೆ. ಇವರು ದೈನಂದಿನ ಚಟುವಟಿಕೆಗಳಿಗೆ ಬಳಸುವ ರಸ್ತೆ ಅಂಗಡಿ ಇತ್ಯಾದಿಗಳೆಲ್ಲ ಭದ್ರತಾ ಪಡೆಗಳ ನಿಗಾದಲ್ಲಿ ಇರುತ್ತವೆ. ಅದೇ ರೀತಿಯಲ್ಲಿ ಇವರು ಬಳಸುವ ವಾಹನಗಳ ಮೇಲೂ ಭದ್ರತಾ ಆ ಸಿಬ್ಬಂದಿ ಕಣ್ಗಾವಲು ಇಟ್ಟಿರುತ್ತಾರೆ.
ಹೀಗಿದ್ದರೂ ಕೂಡ ಆಶ್ಚರ್ಯ ವಿದ್ಯಮಾನವೊಂದು ದೆಹಲಿಯಲ್ಲಿ ಕಳೆದ ಮಾರ್ಚ್ 19ರಂದು ಮಧ್ಯಾಹ್ನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅದೇನೆಂದರೆ,ಜೆ.ಪಿ. ನಡ್ಡಾ ಅವರು ಪತ್ನಿ ಬಳಸುತ್ತಿದ್ದ ಟೊಯೋಟಾ ಫಾರ್ಚೂನರ್ ಕಾರನ್ನು ಯಾರೋ ಕಳ್ಳರು ಅಪಹರಿಸಿ ಪರಾರಿಯಾಗಿದ್ದಾರೆ.
ಘಟನೆ ನಡೆದ ದಿನ ಕಾರಿನ ಚಾಲಕ ಜೋಗಿಂದರ್ ಅವರು ವಾರ್ಷಿಕ ಸರ್ವೀಸ್ಗೆ ಎಂದು ಕಾರನ್ನು ತೆಗೆದುಕೊಂಡು ಹೋಗಿದ್ದರು.
ಅದನ್ನು ವಾಪಸ್ ನಡ್ಡಾ ಅವರ ಮನೆಗೆ ತೆಗೆದುಕೊಂಡು ಬರುವಾಗ ಮಾರ್ಗಮಧ್ಯೆ ಊಟಕ್ಕೆ ಎಂದು ನಿಲ್ಲಿಸಿದ್ದರು. ಚಾಲಕ ರಸ್ತೆ ಪಕ್ಕದಲ್ಲಿ ಕಾರನ್ನು ನಿಲ್ಲಿಸಿ ಹೋಟೆಲ್ ನಲ್ಲಿ ಕುಳಿತು ಊಟ ಮಾಡುತ್ತಿದ್ದರು ಊಟ ಮುಗಿಸಿ ಬಂದು ಕಾರು ನೋಡಿದರೆ ಅದು ಅಲ್ಲಿ ಇರಲೇ ಇಲ್ಲ. ತಕ್ಷಣವೇ ಅವರು ಅಕ್ಕ ಪಕ್ಕದಲ್ಲಿ ಕಾರಿಗಾಗಿ ಹುಡುಕಾಟ ನಡೆಸಿದರು. ಆದರೆ ಎಲ್ಲಿಯೂ ಕಾರು ಕಾಣಿಸಲಿಲ್ಲ ತಕ್ಷಣವೇ ಅವರು ಮಾಲೀಕರಿಗೆ ವಿಷಯ ತಿಳಿಸಿ ಠಾಣೆಯ ಮೆಟ್ಟಿಲೇರಿದ್ದಾರೆ
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಲಭ್ಯವಾದ ಮಾಹಿತಿ ಪ್ರಕಾರ ಕಾರು ಗುರುಗ್ರಾಮದ ಕಡೆ ತೆರಳಿರುವುದು ಗೊತ್ತಾಗಿದೆ. ಸದ್ಯಕ್ಕೆ ಕಾರು ಎಲ್ಲಿದೆ ಅನ್ನೋದು ಗೊತ್ತಾಗಿಲ್ಲ. ಅಪಹರಣಕ್ಕೀಡಾದ ಕಾರು ಹಿಮಾಚಲ ಪ್ರದೇಶದ ರಿಜಿಸ್ಟ್ರೇಷನ್ ಹೊಂದಿದೆ.
2 Comments
необычный бизнес http://biznes-idei13.ru .
проститутки проститутки .