ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಜುಲೈ 1ಕ್ಕೆ ಬಿಡುಗಡೆಯಾಗಲಿದ್ದು ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿದೆ. ಬೈರಾಗಿ ಬಿಡುಗಡೆಗೂ ಮುನ್ನವೇ ಚಿತ್ರ ಲಾಭದಲ್ಲಿದ್ದು, ಚಿತ್ರದ ಸ್ಯಾಟಲೈಟ್ ಹಕ್ಕುಗಳು ₹10 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ.
ಈ ಕುರಿತು ಮಾಹಿತಿ ನೀಡಿದ ನಿರ್ಮಾಪಕ ಕೃಷ್ಣ ಸಾರ್ಥಕ್, ‘ಕನ್ನಡ ಟಿ.ವಿ. ಹಕ್ಕು, ₹10 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ. ಈಗಾಗಲೇ ನಾನು ಸೇಫ್ ಆಗಿದ್ದೇನೆ. ಚಿತ್ರಮಂದಿರಗಳ ಮಾತುಕತೆ ನಡೆಯುತ್ತಿದ್ದು, ಈ ವಾರ ಅಥವ ಮುಂದಿನ ವಾರದಲ್ಲಿ ಲಾಭದಲ್ಲಿರುತ್ತೇನೆ’ ಎಂದಿದ್ದಾರೆ. ಸದ್ಯಕ್ಕೆ ಈ ಸಿನಿಮಾ ಕನ್ನಡದಲ್ಲಷ್ಟೇ ಬಿಡುಗಡೆಯಾಗುತ್ತಿದ್ದು, ಇತರೆ ಭಾಷೆಗಳಿಂದಲೂ ಡಬ್ಬಿಂಗ್‌ಗೆ ಬೇಡಿಕೆ ಬಂದಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಮಾಡುವೆ ಎನ್ನುತ್ತಾರೆ.
ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಶಿವರಾಜ್‌ಕುಮಾರ್, ‘ಶಿವಪ್ಪ ಎನ್ನುವುದು ಲೋ ಪ್ರೊಫೈಲ್ ಪಾತ್ರ. ಈತ ಹುಲಿವೇಷ ಕಲಾವಿದ. ಆದರೆ ಈತನ ಬಡತನದಲ್ಲೂ ಗತ್ತು ಇದೆ. ಇದೊಂದು ಭಾವನಾತ್ಮಕ ಸಿನಿಮಾ. ಶಿವಪ್ಪನ ವ್ಯಕ್ತಿತ್ವ ಸರಳ. ಹೀಗಾಗಿ ನನಗೂ ಈ ಪಾತ್ರ ಹಿಡಿಸಿತು. ನನ್ನ ಹಾಗು ‘ಡಾಲಿ’ ಧನಂಜಯ್ ಪಾತ್ರ ಯಾವ ರೀತಿ ಇರಲಿದೆ ಎನ್ನುವುದನ್ನು ಚಿತ್ರಮಂದಿರದಲ್ಲೇ ನೋಡಬೇಕು’ ಎನ್ನುತ್ತಾರೆ.
ತಮ್ಮದೇ ಬ್ಯಾನರ್‌ನ ‘ವೇದ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಶಿವರಾಜ್‌ಕುಮಾರ್, ಶೀಘ್ರದಲ್ಲೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಆ್ಯಕ್ಷನ್ ಕಟ್ ಹೇಳಲಿರುವ ಸಿನಿಮಾವೊಂದರಲ್ಲೂ ನಟಿಸಲಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದೇನೆ ಎಂದರು.
‘ಇದು ಪ್ಯಾನ್ ಇಂಡಿಯಾ ಸಿನಿಮಾ ಕಾಲ. ಬೇರೆ ಭಾಷೆ ಸಿನಿಮಾಗಳಲ್ಲೂ ನಟಿಸುತ್ತೇನೆ. ರಜನಿಕಾಂತ್ ಅವರ ಜೊತೆ ತೆರೆ ಹಂಚಿಕೊಳ್ಳುವ ಪ್ರಾಜೆಕ್ಟ್ ಇನ್ನೂ ಆರಂಭಿಕ ಹಂತದಲ್ಲಿದೆಯಷ್ಟೇ. ಹೀಗಾಗಿ ಹೆಚ್ಚೇನು ಹೇಳುವುದಿಲ್ಲ. ಕಮಲಹಾಸನ್ ಅವರ ಜೊತೆ ನಟಿಸಬೇಕು ಎನ್ನುವುದು ನನ್ನ ಆಸೆ’ ಎಂದರು ಶಿವಣ್ಣ.
ಎಸ್.ಡಿ. ವಿಜಯ್ ಮಿಲ್ಟನ್ ನಿರ್ದೇಶನದ, ‘ಬೈರಾಗಿ’ ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮವನ್ನು ಚಾಮರಾಜನಗರದಲ್ಲಿ
ಆಯೋಜಿಸಲು ಚಿತ್ರತಂಡ ನಿರ್ಧರಿಸಿದೆ. ಜೂನ್ 24ರಂದು ಬೆಂಗಳೂರಿನಿಂದ ರೋಡ್‌ಶೋ ಆರಂಭಿಸಿ, ರಾಮನಗರ, ಚೆನ್ನಪಟ್ಟಣ, ಮದ್ದೂರು, ಮೈಸೂರಿಗೆ ಚಿತ್ರತಂಡ ಭೇಟಿ ನೀಡಲಿದೆ.
Previous Articleಭರ್ಜರಿ ಸದ್ದು ಮಾಡುತ್ತಿರುವ ಹರಿಕಥೆಯಲ್ಲ ಗಿರಿಕಥೆ
Next Article ಬಂಧನದ ಭೀತಿಯಲ್ಲಿ ರಾಹುಲ್ ಗಾಂಧಿ?