ಚಿಕ್ಕಮಗಳೂರು: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕನ್ನಡಿಗ ಯೋಧ ಗಣೇಶ್ ಮೃತದೇಹ ಬಿಹಾರದ ಕಿಶನ್ಗಂಜ್ ಪ್ರದೇಶದಲ್ಲಿ ಪತ್ತೆಯಾಗಿದೆ.
ಮೃತ ಯೋಧ ಗಣೇಶ್ ಚಿಕ್ಕಮಗಳೂರು ಜಿಲ್ಲೆಯ ಖಾಂಡ್ಯ ಹೋಬಳಿಯ ಮಸೀಗದ್ದೆ ನಿವಾಸಿ ಎನ್ನಲಾಗಿದೆ.
ಗಣೇಶ್ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ. ಏಪ್ರಿಲ್ 24ರಂದು ಊರಿಗೆ ಬಂದಿದ್ದ ಗಣೇಶ್ ಜೂನ್ 9ರಂದು ಕರ್ತವ್ಯಕ್ಕೆ ಹಾಜರಾಗುವ ನಿಮಿತ್ತ ಮನೆಯಿಂದ ಹೊರಟಿದ್ದರು. ಗುವಾಹಟಿಗೆ ಕರೆದೊಯ್ಯುವಾಗ ಗಣೇಶ್ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ರಮೇಶ್ ಕೆ.ಎನ್. ಮಾಹಿತಿ ನೀಡಿದ್ದಾರೆ.