ಬೆಂಗಳೂರು,ಆ.12-ರಾಜ್ಯಾದ್ಯಂತ ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿ, ಸನ್ನಡತೆ ಹೊಂದಿರುವ 81 ಕೈದಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಬಿಡುಗಡೆಯ ಭಾಗ್ಯ ಒದಗಿ ಬಂದಿದೆ.
ಆಗಸ್ಟ್ 15ರಂದು 75 ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆಯಲ್ಲಿಯೇ 81 ಖೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತಿದೆ.
ರಾಜ್ಯ ಸರ್ಕಾರ ರಾಜ್ಯಾಧ್ಯಂತ ವಿವಿಧ ಜೈಲಿನಲ್ಲಿ ಇರುವಂತ 81 ಖೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವ ಸಂಬಂಧ ರಾಜ್ಯಪಾಲರಿಗೆ ಕಡತವನ್ನು ಸಲ್ಲಿಸಿದ್ದರು. ಈ ಕಡತಕ್ಕೆ ಇಂದು ರಾಜ್ಯಪಾಲರು ಅಂಕಿತ ಸೂಚಿಸಿದ್ದಾರೆ. ಹೀಗಾಗಿ ಆಗಸ್ಟ್ 15ರಂದು ಸನ್ನಡತೆಯ ಆಧಾರದ ಮೇಲೆ 81 ಖೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
Previous Articleಈದ್ಗಾ ಮೈದಾನದಲ್ಲಿ ಕಟ್ಟೆಚ್ಚರ ಪೊಲೀಸ್ ಪಥಸಂಚಲನ
Next Article 151 ಮಂದಿ ಪೊಲೀಸ್ ಅಧಿಕಾರಿಗಳಿಗೆ ಪದಕ