ಉಡುಪಿ_ನಿನ್ನೆ ಮುಂಜಾನೆ ಬೈಂದೂರು ಗಡಿ ಭಾಗದಲ್ಲಿ ಪತ್ತೆಯಾದ ಸುಟ್ಟ ಕಾರು ಮತ್ತು ಅಸ್ಥಿಪಂಜರ ಜಿಲ್ಲೆಯಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸ್ ತನಿಖಾಧಿಕಾರಿಗಳಿಗೆ ಸುಟ್ಟ ಕಾರಿನಲ್ಲಿ ಪತ್ತೆಯಾದ ಅಸ್ಥಿಪಂಜರ ಗುರುತು ಪತ್ತೆಯಾಗಿದೆ. ಕಾರಿನ ಮಾಲಕನೇ ಬಂಧನದ ಭೀತಿಯಲ್ಲಿ ಕ್ರೈಂ ಸ್ಟೋರಿ ಕೊಲೆ ಮಾಡಿ ಸುಟ್ಟಿರುವ ಘಟನೆ ಸದ್ಯ ಬೆಳಕಿಗೆ ಬಂದಿದೆ..
ಹೌದು ನಿನ್ನೆ ಮುಂಜಾನೆ ಜಿಲ್ಲೆಯ ಗಡಿಯ ತಾಲೂಕು ಬೈಂದೂರಿನ ನಿರ್ಜನ ಪ್ರದೇಶದಲ್ಲಿ ಸುಟ್ಟ ಕಾರೊಂದು ಅಸ್ಥಿಪಂಜರದೊಂದಿಗೆ ಪತ್ತೆಯಾಗಿ ಜಿಲ್ಲೆ ಮತ್ತೊಮ್ಮೆ ಬೆಚ್ಚಿಬೀಳುವಂತೆ ಮಾಡಿದೆ. ಬೈಂದೂರು ತಾಲೂಕಿನ ಶಿರೂರು ಒತ್ತನೆಣೆ ಹೆನ್ ಬೇರು ಎಂಬಲ್ಲಿ ಸೆಡಾನ್ ಕಾರ್ ಸಂಪೂರ್ಣ ಸುಟ್ಟು ಭಸ್ಮವಾಗಿ, ಒಳಗೆ ಅಸ್ಥಿಪಂಜರ ಪತ್ತೆಯಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಸುಟ್ಟು ಹೋದ ಕಾರು ಕಾರ್ಕಳ ತಾಲೂಕಿನ ಮಾಳ ಗ್ರಾಮದ ನಿವಾಸಿ ಸದಾನಂದ ಶೇರಿಗಾರ್ ಎಂಬವರಿಗೆ ಸೇರಿದ್ದು ಎಂದು ಪತ್ತೆಹಚ್ಚಿದ್ದಾರೆ. ಕಾರಿನ ಚೆಸ್ಸಿ ನಂಬರ್ ಮೂಲಕ ಕಾರಿನ ನಂಬರ್ ಪತ್ತೆ ಮಾಡಿ ಪರಿಶೀಲನೆ ನೆಡೆಸಿದಾಗ ಕಾರು ಮಂಗಳವಾರ ರಾತ್ರಿ 12.30ಕ್ಕೆ ಸಾಸ್ತಾನ ಟೋಲ್ ಗೇಟಿನಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗಿರುವುದು ತಿಳಿದುಬಂದಿದೆ. ಮಾತ್ರವಲ್ಲದೆ ಸಾಸ್ತಾನ ಟೋಲ್ ಗೇಟ್ ನಲ್ಲಿ ಮಹಿಳೆಯೊಬ್ಬಳು ಕಾರಿನಿಂದ ಇಳಿದು ಟೋಲ್ ಸಿಬ್ಬಂದಿಗೆ ಹಣ ನೀಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಸಾಸ್ತಾನ ಟೋಲ್ ಗೇಟ್ ನ ಸಿಸಿ ಟಿವಿ ಪೂಟೇಜ್ ನಲ್ಲಿ ಕಂಡ ಮಹಿಳೆ ಯಾರು? ರಾತ್ರಿ 12-30 ಕ್ಕೆ ಸಾಸ್ತಾನ ಟೋಲ್ ಗೇಟಿನಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಪ್ರಾಯಾಣಿಸಿರುವ ದೃಶ್ಯ ಸೆರೆ ಸಂಪೂರ್ಣ ಲಾಕ್ ಮಾಡಿದ ಸ್ಥಿತಿಯಲ್ಲಿದ್ದ ಕಾರಿನಲ್ಲಿದ್ದ ಅಸ್ಥಿಪಂಜರ ಯಾರದ್ದು?
ತನಿಖೆಯ ವೇಳೆ ಕಾರಿನ ಹಿಂಬದಿ ಸೀಟಿನಲ್ಲಿ ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾದ ಮೃತ ದೇಹವನ್ನು ಕಾರ್ಕಳದ ಶಿಲ್ಪಾ ಎನ್ನುವ ಮಹಿಳೆಯದ್ದಾಗಿದೆ ಎನ್ನಲಾಗಿತ್ತು. ಆದರೆ ಶಿಲ್ಪ ಅವರು ಜೀವಂತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಕಾರು ಮಾಲಿಕ ಸದಾನಂದ ಶೇರಿಗಾರ್ ಮತ್ತು ಶಿಲ್ಪಾ ಅವರ ಪತಿ ಸ್ನೇಹಿತರು ಎನ್ನುವ ಮಾಹಿತಿ ಲಭ್ಯವಾಗಿತ್ತು. ಮೇಲ್ನೋಟಕ್ಕೆ ಕೊಲೆಯಂತೆ ಭಾಸವಾದ ಪ್ರಕರಣವನ್ನು ಬೆನ್ನಟ್ಟಿದ್ದ ಬೈಂದೂರು ಪೊಲೀಸರು ಕಾರಿನ ಮಾಲಕನಾದ ಸದಾನಂದ ಶೇರೆಗಾರ್ ಕುಟುಂಬದ ವಿವರ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ. ಹಳೆಯ ಪ್ರಕರಣದಲ್ಲಿ ಸದಾನಂದ ಶೇರೆಗಾರ್ ಬಂಧನ ಭೀತಿಯಿಂದ, ಕೈಂ ಸ್ಟೋರಿ ಒಂದರಲ್ಲಿ ನೋಡಿದ ಕಥೆಯಂತೆ ತಾನೇ ಸತ್ತುಹೋಗಿರುವ ಸುದ್ದಿ ಬಿಂಬಿಸಲು ಸ್ವಂತ ಕಾರಿನಲ್ಲಿ ತನ್ನದೇ ವ್ಯಕ್ತಿತ್ವ ಹೋಲುವ ವ್ಯಕ್ತಿಯನ್ನು ತನ್ನ ಅನೈತಿಕ ಸಂಬಂಧದ ಗೆಳತಿ ಶಿಲ್ಪಾ ಪೂಜಾರಿ ಮೂಲಕ ಬಲೆಗೆ ಬೀಳಿಸಿದ್ದಾನೆ. ಕಾರ್ಕಳದಲ್ಲಿ ಕಂಠಪೂರ್ತಿ ಕುಡಿಸಿ ವಯಾಗ್ರ ಮಾತ್ರೆ ಎಂದು ನಿದ್ರೆ ಮಾತ್ರೆ ನೀಡಿ ಕಾರಿನಲ್ಲಿ ಕುಳ್ಳಿಸಿಕೊಂಡು ಬಂದು ಹೇನ್‌ಬೇರು ರಸ್ತೆ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಪೊಲೀಸ್ ತನಿಖೆಯ ವೇಳೆ ಸದಾನಂದ ಶೇರೆಗಾರ್(52), ಶಿಲ್ಪಾ (30) ಪ್ರಮುಖ ಆರೋಪಿಗಳಾದರೆ ಸತೀಶ್ ದೇವಾಡಿಗ, ನಿತಿನ್ ದೇವಾಡಿಗ ಕೊಲೆಗೆ ಸಾಥ್ ನೀಡಿರುವುದು ಪತ್ತೆಯಾಗಿದ್ದು, ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಮತ್ತು ಹೆಚ್ಚಿನ ವಿವರಗಳನ್ನು ಆರಕ್ಷಕರು ತನಿಖೆ ನಡೆಸುತ್ತಿದ್ದಾರೆ.
ತನಿಖೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಬೈಂದೂರು ಪೊಲೀಸ್ ರು ಶಿಲ್ಪಾ ಪೂಜಾರಿ, ಸತೀಶ್ ದೇವಾಡಿಗ, ನಿತಿಶ್ ದೇವಾಡಿಗ, ಸದಾನಂದ ಶೇರೆಗಾರ್ ಬಂಧಿತ ಆರೋಪಿಗಳು ಮೇಸ್ತ್ರೀ ಆನಂದ್ ಮೇಸ್ತ್ರೀ ಹೆಣ್ಣು ಹೆಂಡದ ಆಸೆಯಿಂದ ಜೀವ ಕಳೆದುಕೊಂಡಾತ.
ಒಟ್ಟಾರೆಯಾಗಿ, ಕ್ರೈಂ ಸ್ರ್ಟೋರಿ ನೋಡಿ ಗುತ್ತಿಗೆ ಆಧಾರದ ಸರ್ವೇಯರ್ ಸದಾನಂದ ಮೇಸ್ತ್ರಿಯ ಜೀವ ತೆಗೆದಿದ್ದಾನೆ. ಹಳೆಯ ಪ್ರಕರಣದಲ್ಲಿ ಬಂಧನಕ್ಕೊಳಬೇಕಾದ ತಾನು ಮಾಡಿದ ಯಡವಟ್ಟು ಯೋಜನೆಯಿಂದಲೇ ಕೊಲೆ ಆರೋಪಿಯಾಗಿ ಜೈಲು ಕಂಬಿ ಎಣಿಸುವಂತಾಗಿದೆ.