ಬೆಂಗಳೂರು, ಆ.22-ವೇಗವಾಗಿ ಹೋಗುತ್ತಿದ್ದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಸಿವಿಲ್ ಇಂಜಿನಿಯರ್ ಮೃತಪಟ್ಟರೆ, ಸವಾರ ಗಾಯಗೊಂಡಿರುವ ದಾರುಣ ಘಟನೆ ಚಿಕ್ಕಜಾಲದಲ್ಲಿ ನಡೆದಿದೆ.
ಯಲಹಂಕದ ನಿಟ್ಟೆ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರ್ ಓದುತ್ತಿದ್ದ ಬೀದರ್ ಮೂಲದ ಅಜಯ್ ಕೋರಿ(21)ಮೃತಪಟ್ಟವರು, ಗಾಯಗೊಂಡಿರುವ ಅವರ ಸೋದರ ಸಂಬಂಧಿ ಸಾಯಿಕಿರಣ್ ಎಸ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಡಿಸಿಪಿ ಸವಿತಾ ಅವರು ತಿಳಿಸಿದ್ದಾರೆ
ಚಿಕ್ಕಜಾಲದ ರೇವ ಕಾಲೇಜ್ ರಸ್ತೆಯಲ್ಲಿ ನಿನ್ನೆ ಸಂಜೆ ಸಾಯಿಕಿರಣ್ ಅವರು ಕೆಟಿಎಂ ಬೈಕ್ ನಲ್ಲಿ ಸೋದರ ಸಂಬಂಧಿ ಅಜಯ್ ಕೋರಿ ಅವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಬೈಕನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿರುವಾಗ ರಸ್ತೆಯ ತಿರುವಿನಲ್ಲಿ ವಾಹನವು ನಿಯಂತ್ರಣಕ್ಕೆ ಸಿಗದೇ ರಸ್ತೆಬದಿಯ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ವಯಂ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಹಿಂಬದಿ ಸವಾರ ಅಜಯ್ ಕೋರಿ ರವರು ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಚಾಲಕ ಸಾಯಿಕಿರಣ್ ರವರು ಎಸ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿರುವ ಚಿಕ್ಕಜಾಲ ಸಂಚಾರ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದರು.
Previous Articleಹಂದಿಗಳನ್ನು ಹೀಗೆ ಕದ್ದೊಯ್ದರು.. !!
Next Article ರೈಲ್ವೆ ಪ್ಲಾಟ್ ಫಾರ್ಮ್ ನಲ್ಲೆ ಹೆರಿಗೆ..