ಬೆಂಗಳೂರು,ಆ.24-ಪದವಿ ಪ್ರಮಾಣ ಪತ್ರ ಹಾಗು ಅಂಕಪಟ್ಟಿಗಳನ್ನು ನಕಲಿಯಾಗಿ ಸೃಷ್ಟಿಸಿ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ ಗ್ಯಾಂಗ್ ಬಂಧಿಸುವಲ್ಲಿ ಕೇಂದ್ರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಅಯೂಬ್ ಪಾಷ ಅಲಿಯಾಸ್ ಅಯೂಬ್(52) ಚಿಕ್ಕಬಳ್ಳಾಪುರದ ಖಲೀಲ್‍ವುಲ್ಲಾ ಬೇಗ್.ಎ ಅಲಿಯಾಸ್ ಖಲೀಲ್(52)ನನ್ನು ಬಂಧಿತ ಗ್ಯಾಂಗ್ ನ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಗಜರಾಜ್.ಬಿ. ಹೆಸರಿನಲ್ಲಿರುವ ಬಿ.ಕಾಂ ವ್ಯಾಸಂಗದ 2 ನಕಲಿ ಪದವಿ ಪ್ರಮಾಣ ಪತ್ರಗಳು ಹಾಗೂ 1 ರಿಂದ 6 ನೇ ಸೆಮಿಸ್ವಾರ್ ನ 6 ನಕಲಿ ಅಂಕಪಟ್ಟಿಗಳು, ಪಿಯುಷ್‍ಕುಮಾರ್ ಹೆಸರಿನಲ್ಲಿರುವ ಬಿ.ಕಾಂ ವ್ಯಾಸಂಗದ 2 ನಕಲಿ ಪದವಿ ಪ್ರಮಾಣ ಪತ್ರಗಳು ಹಾಗು 1 ರಿಂದ 6 ನೇ ಸೆಮಿಸ್ವಾರ್ ಒಟ್ಟು 6 ನಕಲಿ ಅಂಕಪಟ್ಟಿಗಳನ್ನು ಜಪ್ತಿ ಮಾಡಲಾಗಿದೆ.
ಇದಲ್ಲದೆ ಕೃಷ್ಣಸ್ವಾಮಿ ಹೆಸರಿನ ಒಂದು ದ್ವಿತೀಯ ಪಿಯುಸಿ.ವ್ಯಾಸಂಗದ ಸಂಬಂಧ 1 ಪದವಿ ಪೂರ್ವ ಪ್ರಮಾಣ ಪತ್ರ,ಮಹಮದ್ ಇಮ್ರಾನ್ ಹೆಸರಿನಲ್ಲಿರುವ ಬಿ.ಬಿ.ಎಂ. ವ್ಯಾಸಂಗದ 2 ನಕಲಿ ಪದವಿ ಪ್ರಮಾಣ
ಪತ್ರ ಹಾಗೂ 1 ರಿಂದ 6ನೇ ಸೆಮಿಸ್ಟಾರ್ ನ ಒಟ್ಟು 6 ನಕಲಿ ಅಂಕಪಟ್ಟಿಗಳು.ಮಹಮದ್ ಅಜರ್ ಹೆಸರಿನಲ್ಲಿರುವ ಬಿ.ಕಾಂ ವ್ಯಾಸಂಗದ 2 ನಕಲಿ ಪದವಿ ಪ್ರಮಾಣ ಪತ್ರಗಳು ಮತ್ತು 1 ರಿಂದ 6ನೇ ಸೆಮಿಸ್ಟರ್ ನ ಒಟ್ಟು 6 ನಕಲಿ ಅಂಕಪಟ್ಟಿಗಳು.ಮಹಮದ್ ಅಂಜಾ ಖುರೇಷ್ ಹೆಸರಿನಲ್ಲಿರುವ ಬಿ.ಇ. ವ್ಯಾಸಂಗದ 1 ನಕಲಿ ಪ್ರಮಾಣ ಪತ್ರ ಮತ್ತು 4 ಅಂಕಪಟ್ಟಿಗನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.
ಆರೋಪಿಗಳಿಂದ 38 ನಕಲಿ ದಾಖಲೆಗಳು ಹಾಗು ನಕಲಿ ದಾಖಲೆಗಳನ್ನು ತಯಾರು ಮಾಡಲು ಉಪಯೋಗಿಸುತ್ತಿದ್ದ ಒಂದು ಲ್ಯಾಪ್ ಟ್ಯಾಪ್ ಮತ್ತು ಒಂದು ಪ್ರಿಂಟಿಂಗ್ ಮಿಷನ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ 2 ಮೊಬೈಲ್ ಹ್ಯಾಂಡ್ ಸೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ..
ಆರೋಪಿತರು ಸ್ನೇಹಿತರಾಗಿದ್ದು, ಇವರುಗಳು ಸುಮಾರು 2-3 ವರ್ಷಗಳಿಂದ ಹೊರ ರಾಷ್ಟ್ರ್ರಗಳಾದ ಸೌದಿ ಅರೇಬಿಯಾ, ದುಬೈ ಇತ್ಯಾದಿ ರಾಷ್ಟ್ರಗಳಿಗೆ ಹೋಗಲು ಬಯಸುವ ವ್ಯಕ್ತಿಗಳು ಉನ್ನತ ವ್ಯಾಸಂಗ ಮಾಡದಿದ್ದರೂ ಸಹ ಸದರಿಯವರುಗಳು ಬಿ.ಕಾ. ಬಿ.ಬಿ.ಎಂ, ಬಿ.ಇ. [ಸಿವಿಲ್] ಮತ್ತು ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡಿದಂತೆ ನಕಲಿ ಪದವಿ ಪ್ರಮಾಣ ಪತ್ರ ಮತ್ತು ನಕಲಿ ಪದವಿ ಅಂಕಪಟ್ಟಿಗಳನ್ನು ಸೃಷ್ಟಿ ಮಾಡಿಕೊಟ್ಟು ಅವರುಗಳಿಂದ ಅಕ್ರಮವಾಗಿ ಹಣ ಪಡೆದು ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಮೋಸ ಮಾಡುತ್ತಿದ್ದರು ಎಂದರು.
ಶೇಷಾದ್ರಿಪುರಂ ಇನ್ಸ್‌ಪೆಕ್ಟರ್ ರವಿ ಮತ್ತವರ ಸಿಬ್ಬಂದಿ ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
Previous Articleನಿಮ್ಮ ಮೊಬೈಲ್ ನಲ್ಲಿ ವೈರಸ್ ಹರಡೋ ಆ್ಯಪ್ ಇದೆಯಾ? ಚೆಕ್ ಮಾಡಿ
Next Article ನೈಂಟಿ ಬಿಡಿ ಮನೀಗ್ ನಡಿ