ಬೆಂಗಳೂರು,ಜು.14-ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಪತಿ, ಪತ್ನಿ, ಅತ್ತೆ ಹಾಗು ಕಳವು ಮಾಲು ಖರೀದಿಸುತ್ತಿದ್ದ ಇಬ್ಬರು ಸೇರಿ ಐವರ ಗ್ಯಾಂಗ್ ನ್ನು ಬಂಧಿಸುವಲ್ಲಿ ಸಂಪಿಗೆಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆ.ಜಿ ಹಳ್ಳಿಯ ಬಾಗಲೂರು ಲೇಔಟ್ ಜಾನ್ ಪ್ರವೀಣ್ ಅಲಿಯಾಸ್ ಮೂಗು ಮಚ್ಚೆ(32) ಹಾಗು ಆತನ ಪತ್ನಿ ಆನಂದಿ(19) ಅತ್ತೆ ಧನಲಕ್ಷ್ಮಿ ಅಲಿಯಾಸ್ ಧನ (36) ಹಾಗು ಕಳವು ಮಾಲುಗಳನ್ನು ಖರೀದಿಸುತ್ತಿದ್ದ ಪಿಳ್ಳಣ್ಣ ಗಾರ್ಡನ್ ನ ಭವರ್ ಲಾಲ್ (48) ಹಾಗು ಚೇತನ್ ಚೌಧರಿ(29)ಬಂಧಿತ ಗ್ಯಾಂಗ್ ನ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 17.35 ಲಕ್ಷ ಮೌಲ್ಯದ ಚಿನ್ನ ಹಾಗು ಬೆಳ್ಳಿಯ ಒಡವೆಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ.ಅನೂಪ್ ಎ. ಶೆಟ್ಟಿ ತಿಳಿಸಿದ್ದಾರೆ.
ಕಳೆದ ಮೇ.5 ರಂದು ಸಂಪಿಗೆಹಳ್ಳಿಯ ಮನೆಯ ಮುಂಭಾಗಿಲಿಗೆ ಬೀಗ ಹಾಕಿ ಸೆಖೆಯ ಕಾರಣದಿಂದ ರಾತ್ರಿ 8ರ ವೇಳೆ ಕುಟುಂಬದ ಜೊತೆಗೆ ವ್ಯಕ್ತಿಯೊಬ್ಬರು ಮನೆಯ ಮಹಡಿಯ ಮೇಲೆ ಹೋಗಿ ಮಲಗಿದ್ದರು.
ಮುಂಜಾನೆ ಎದ್ದು ಕೆಳಗೆ ಬಂದು ನೋಡಿದಾಗ ಮನೆಗೆ ನುಗ್ಗಿ ಹಣ, ಚಿನ್ನ, ಬೆಳ್ಳಿ ಆಭರಣಗಳು, ಆರ್‍ಸಿ ಬುಕ್ ಡಿಎಲ್, ಮೊಬೈಲ್ ಇದ್ದ ಬ್ಯಾಗ್ ಕಳವು ಮಾಡಲಾಗಿತ್ತು.
ಈ ಸಂಬಂಧ ದೂರು ಆಧರಿಸಿ ಪ್ರಕರಣ ದಾಖಲಿಸಿ ಪತ್ತೆ ಮಾಡಲು ವಿಶೇಷ ತಂಡ ಆರೋಪಿ ಜಾನ್ ಪ್ರವೀಣ್ ಹಾಗು ಆತನಿಗೆ ಕಳವು ಮಾಡಲು ಪ್ರೋತ್ಸಾಹಿಸಿದ ಕಳವು ಮಾಲು ಎಂದು ಗೊತ್ತಿದ್ದರು ಸಹ ಅಕ್ರಮ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಖರೀದಿಸುತ್ತಿದ್ದ ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದರು.
ಸಂಪಿಗೆಹಳ್ಳಿ ಉಪ ವಿಭಾಗದ ಎಸಿಪಿ ರಂಗಪ್ಪ ಪೊಲೀಸ್ ಇನ್ಸ್‍ಪೆಕ್ಟರ್ ಶ್ರೀ ಕೆ.ಟಿ. ನಾಗರಾಜು ಅವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ಉತ್ತಮ ಕೆಲಸ ಮಾಡಿದೆ ಎಂದು ಹೇಳಿದರು.
Previous Article11 ಮದುವೆಯಾದ ಧೀರ : ಒಟ್ಟಿಗೆ ಇಬ್ಬರು ಪತ್ನಿಯರು ಪ್ರತ್ಯಕ್ಷ!!
Next Article ನೀರಿನ ಹೊಂಡಕ್ಕೆ ಬಿದ್ದ ಮಗು ಇನ್ನಿಲ್ಲ