ಬೆಂಗಳೂರು,ಆ.22-ವಿದ್ಯುತ್ ಪರಿವರ್ತನೆಗೆ ಆಳವಡಿಸುತ್ತಿದ್ದ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಗುಜರಿ ಅಂಗಡಿ ಮಾಲೀಕ ಸೇರಿ ನಾಲ್ವರು ಆರೋಪಿಗಳನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಟ್ಟಿಗೆನಹಳ್ಳಿಯ ಕೋಗಿಲು ಮುಖ್ಯರಸ್ತೆಯ ಚಿನ್ನದೊರೆ(35), ರಮೇಶ್(36) ಸಾರಾಯಿಪಾಳ್ಯದ ವೇಣುಗೋಪಾಲ(26) ಹಾಗು ಕಟ್ಟಿಗೇನಹಳ್ಳಿಯ ವಂಸತ್ (27)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಮಲ್ಲೇಶ್ವರಂನ 18 ನೇ ಕ್ರಾಸ್ ನ ಸರ್ಕಾರಿ ಕಾಲೇಜ್ ಬಳಿಯ ಬೆಸ್ಕಾಂ ಸಂಬಂಧಿಸಿದ 11 ಕೆ.ವಿ. ಅಧಿಕ ಓತ್ತಡ ನಿಯಂತ್ರಣ ಬಾಕ್ಸ್ ನಲ್ಲಿ (ಆರ್.ಎಂ.ಯು)ಅಳವಡಿಸಿದ್ದ ಬ್ಯಾಟರಿಗಳನ್ನು ಕಳೆದ ಆ.8ರಂದು ಮುಂಜಾನೆ ಕಳವು ಮಾಡಲಾಗಿತ್ತು.
ಈ ಬಂದ ದೂರಿನ ಮೇರೆಗೆ ಕಳವು ಪ್ರಕರಣ ದಾಖಲಿಸಿ ಕೃತ್ಯ ನಡೆದ ಸ್ಥಳದಲ್ಲಿನ ಅಕ್ಕಪಕ್ಕದ ಸಿಸಿಟಿವಿ ದೃಶ್ಯಾವಳಿ ಸಹಾಯದಿಂದ ಕೃತ್ಯವೆಸಗಿದ್ದ ನಾಲ್ವರನ್ನು ದಸ್ತಗಿರಿ ಮಾಡಿ ಸುಮಾರು 5 ಲಕ್ಷ ರೂ. ಬೆಲೆ ಬಾಳುವ 100 ಬ್ಯಾಟರಿಗಳನ್ನು ಕೃತ್ಯಕ್ಕೆ ಬಳಿಸಿದ್ದ 2 ಪ್ಯಾಸೆಂಜರ್ ಆಟೋ ರಿಕ್ಷಾ, 1-ಲಗೇಜ್ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆಯಲ್ಲಿ ಮೊದಲ ಆರೋಪಿಯು ಮೂಲತಃ ತಮಿಳುನಾಡಿನವನಾಗಿದ್ದು, ಕೋಗಿಲು ಕ್ರಾಸಿನಲ್ಲಿ ಗುಜರಿ ಅಂಗಡಿ ಇಟ್ಟುಕೊಂಡು Business ಮಾಡಿಕೊಂಡಿರುತ್ತಾನೆ. ಆತ ತನ್ನೂರಿನಿಂದ ಉಳಿದ ಮೂವರು ಆರೋಪಿಗಳನ್ನು ಕೆಲಸಕ್ಕೆಂದು ಕರೆದುಕೊಂಡು ಬಂದು ಬೆಸ್ಕಾಂ ನ ನಿಯಂತ್ರಣ ಬಾಕ್ಸ್ ಗಳನ್ನು ಅಳವಡಿಸಿದ ಜಾಗಗಳನ್ನು ಗುರುತಿಸಿ ರಾತ್ರಿ ವೇಳೆಯಲ್ಲಿ ಕಳವು ಮಾಡುತ್ತಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.
ಆರೋಪಿಗಳ ಬಂಧನದಿಂದ ಮಲ್ಲೇಶ್ವರಂ-1, ಶ್ರೀರಾಮಪುರ-1, ಶೇಷಾದ್ರಿಪುರಂ-2, ವರ್ತೂರು-2, ವೈಯ್ಯಾಲಿಕಾವಲ್-2, ಗಿರಿನಗರ-1, ಸದಾಶಿನಗರ-1, ಹಲಸೂರು-1, ಬ್ಯಾಟರಿ ಕಳವು ಪ್ರಕರಣ ಸೇರಿದಂತೆ ಒಟ್ಟು 11 ಪ್ರಕರಣಗಳು ಪತ್ತೆಯಾಗಿದೆ.
ಆರೋಪಿಗಳನ್ನು ಮಲ್ಲೇಶ್ವರಂ ಪೊಲೀಸ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಎಂ ನೇತೃತ್ವದ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿನಾಯಕ್ ತಿಳಿಸಿದರು.
ಬ್ಯಾಟರಿಗಳ ಕಳವು ಗುಜರಿ ಅಂಗಡಿ ಮಾಲೀಕ ಸೇರಿ ನಾಲ್ವರು ಸೆರೆ
Previous Articleರೈಲ್ವೆ ಪ್ಲಾಟ್ ಫಾರ್ಮ್ ನಲ್ಲೆ ಹೆರಿಗೆ..
Next Article ಸಿಎಂ ಮಾಧ್ಯಮ ಕಾರ್ಯದರ್ಶಿ ಗುರುಲಿಂಗಸ್ವಾಮಿ ಇನ್ನಿಲ್ಲ