ಬೆಂಗಳೂರು,ಆ.5– ಪಶು ಸಂಗೋಪನೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ ಖತರ್ನಾಕ್ ಶಿಕ್ಷಕನೊಬ್ಬನನ್ನು ಸಂಜಯನಗರ ಪೊಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜ್ಞಾನದೇವ್ ಜಾಧವ್ ಬಂಧಿತ ಆರೋಪಿಯಾಗಿದ್ದು ಪಶು ಸಂಗೋಪನೆ ಸಚಿವರು ನನಗೆ ಆಪ್ತ ಎಂದು ನಂಬಿಸಿ ಅಭ್ಯರ್ಥಿಗಳಿಗೆ ವಂಚಿಸಿರುವ ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಜ್ಞಾನದೇವ್ ಜಾಧವ್ ಇಲಾಖೆಯ ಎಫ್‍ಡಿಎ, ಎಸ್‍ಡಿಎ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ನಕಲಿ ಆದೇಶ ಪ್ರತಿ ಸೃಷ್ಟಿ ಮಾಡಿದ್ದ. ಅಲ್ಲದೆ ಪಶುಸಂಗೋಪನೆ ಇಲಾಖೆಯ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಆದೇಶ ಮತ್ತು ಹೆಸರನ್ನ ನಕಲಿ ಮಾಡಿ ದಾಖಲೆ ಸೃಷ್ಟಿಸಿದ್ದ. ನೇಮಕಾತಿ ಪ್ರಕ್ರಿಯೆಯನ್ನ ಥೇಟ್ ಸರ್ಕಾರಿ ನೇಮಕಾತಿಯಂತೆ ನಡೆಸಿದ್ದ.
ಕಳೆದ ಜುಲೈ 30ರ ಒಳಗೆ ಅಕ್ಷೇಪಗಳಿದ್ದರೆ ಅರ್ಜಿ ಸಲ್ಲಿಸುವಂತೆ ಇಲಾಖೆ ಹೆಸರಿನಲ್ಲಿ ಆದೇಶ ಹೊರಡಿಸಿದ್ದ. ಹೀಗೆ ಹುದ್ದೆಗೆ ಅರ್ಜಿ ಸಲ್ಲಿಸಿದ 63 ಅಭ್ಯರ್ಥಿಗಳಿಂದ ತಲಾ 2 ಲಕ್ಷ ಹಣ ಪಡೆದಿದ್ದ. ಕೆಲ ಅಭ್ಯರ್ಥಿಗಳು ಇಲಾಖೆಯನ್ನ ಸಂಪರ್ಕಿಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಜಾಧವ್ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Previous Articleರಾಮ್ ಜೀ ಗ್ಯಾಂಗ್ ನ ಇಬ್ಬರು ಆರೋಪಿಗಳ ಬಂಧನ
Next Article ಮಹಾರಾಷ್ಟ್ರದ ಸರಗಳ್ಳನ ಬಂಧನ..!!