ಬೆಂಗಳೂರು, ಆ.18-ಬ್ಲಾಕ್ ಮೇಲ್ ಮಾಡಿ ಬೆದರಿಸಿದರೂ ಹಣ ನೀಡಲು ನಿರಾಕರಿಸಿದ ವೇಶ್ಯೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಪರಾರಿಯಾಗಿದ್ದ ಖತರ್ನಾಕ್ ಆಟೋ ಚಾಲಕನನ್ನು ಬಂಧಿಸುವಲ್ಲಿ ಆಗ್ನೇಯ ವಿಭಾಗದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೇಶ್ಯಾವಾಟಿಕೆ ನಡೆಸುತಿದ್ದ ಹಸೀನಾ (38)ರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಆಟೋ ಚಾಲಕ ವಾಸಿಮ್ ನನ್ನು 80ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ದೃಶಾವಳಿಯನ್ನು ಪರಿಶೀಲನೆ ನಡೆಸಿ ತಂತ್ರಜ್ಞಾನ ಆಧರಿಸಿ ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.
ಮಡಿವಾಳ ಕರೆ ದಂಡೆ ಮೇಲೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆಯಾದ ಮಹಿಳೆಯ ಮೃತ ದೇಹ ಪತ್ತೆಯಾಗಿದ್ದು ಸುದ್ದಿ ತಿಳಿದ ತಕ್ಷಣವೇ ಬೊಮ್ಮನಹಳ್ಳಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.
ಮಹಿಳೆಯನ್ನು ಗುರುತನ್ನು ಒಂದೂವರೆ ದಿನದಲ್ಲಿ ವಿಶೇಷ ತಂಡದ ಪೊಲೀಸರು ಹಲವು ಅಯಾಮದ ತನಿಖೆಯನ್ನು ಕೈಗೊಂಡು ಪತ್ತೆ ಹಚ್ಚಿದ್ದರು.
ಕೊಲೆಯಾದ ಮಹಿಳೆ ಹಸೀನಾ ಎಂದು ಪತ್ತೆಯಾಗಿದ್ದು ಸುಮಾರು 30 ಕಿಮೀ ವ್ಯಾಪ್ತಿಯಲ್ಲಿರುವ 80ಕ್ಕೂ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಯಿತು. ಆಗ ಕೊಲೆಯಾದ ಮಹಿಳೆಯು ಆಟೋ ಚಾಲಕನ ಜೊತೆ ಹೋಗಿದ್ದು ತಿಳಿಯಿತು.
ಕೃತ್ಯ ನಡೆಯುವ 3 ದಿನಗಳ ಹಿಂದೆ ಆಟೋ ಚಾಲಕ ಆರೋಪಿ ವಾಸಿಂಗೆ ಮಹಿಳೆಯ ಪರಿಚಯವಾಗಿತ್ತು.
ಹಣದ ಅವಶ್ಯಕತೆ ಇದ್ದ ಕಾರಣಕ್ಕೆ ಆರೋಪಿ ಮಹಿಳೆಯ ಬಳಿ ಹಣ ಕೇಳುತ್ತಾನೆ. ಆದರೆ ಹಸೀನಾ ಹಣ ಕೊಡಲಿಲ್ಲ ಎನ್ನುವ ಕಾರಣಕ್ಕೆ ಕೊಲೆ ಮಾಡಿದ್ದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದರು. ವೇಶ್ಯೆಯರನ್ನು ಪಿಕ್‌ಆಪ್ ಡ್ರಾಪ್ ಮಾಡುತಿದ್ದ ಆರೋಪಿಗೆ ಮೂರು ವೇಶ್ಯಾವಾಟಿಕೆ ನಡೆಸುತಿದ್ದ ಹಸೀನಾ (38)ಗೆ ಕೃತ್ಯ ನಡೆಯುವ 3 ದಿನಗಳ ಮುನ್ನ ಪರಿಚಯವಾಗಿದ್ದರು.
ಈ ವೇಳೆ ನೀನು ವೇಶ್ಯಾವಾಟಿಕೆ ನಡೆಸುತಿದ್ದಿಯಾ.ಈ ವಿಚಾರ ಪೊಲೀಸರಿಗೆ ನಾನು ತಿಳಿಸಬಾರದು ಎಂದರೆ ನನಗೆ ಹಣ ನೀಡಬೇಕು ಎಂದು ಬ್ಲ್ಯಾಕ್ ಮೇಲ್ ಮಾಡಿದ್ದ.
ಆದರೆ ಹಣ ನೀಡಲು ಆಕೆ ನಿರಾಕರಿಸಿದ್ದು ಸಂಚು ಮಾಡಿದ ಆರೋಪಿ ಗಿರಾಕಿ ಇದ್ದಾರೆ ಎಂದು ಬೊಮ್ಮನಹಳ್ಳಿ ಕೆರೆ ಬಳಿ ಕರೆದೊಯ್ದು ಮತ್ತೆ ಹಣಕ್ಕಾಗಿ ಖ್ಯಾತೆ ತೆಗೆದು ಗಲಾಟೆ ಮಾಡಿದ್ದಾನೆ.
ಜಗಳ ಅತೀರೇಕವಾಗಿ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ ಆರೋಪಿ ವಾಸಿಮ್ ತಲೆ ಮರೆಸಿಕೊಂಡಿದ್ದು ಬಳಿಕ ಕಾರ್ಯಾಚರಣೆ ನಡೆಸಿದ ಬೊಮ್ಮನಹಳ್ಳಿ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ ಎಂದು ಬಾಬಾ ತಿಳಿಸಿದರು.