ಬೆಂಗಳೂರು, ಜು.6-ಹಗಲು ರಾತ್ರಿ ಕನ್ನಾ ಕಳವು ಮಾಡುತ್ತಿದ್ದ ನಾಲ್ವರು ಕನ್ನಗಳ್ಳರನ್ನು ಬಂಧಿಸಿರುವ ಸೋಲದೇವನಹಳ್ಳಿ ಪೊಲೀಸರು 5 ಲಕ್ಷ ಮೌಲ್ಯದ ಹಳೆ 110 ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಲದೇವನಹಳ್ಳಿ ಬಳಿಯ ಸೋಮಶೆಟ್ಟಿಹಳ್ಳಿಯಲ್ಲಿ ZMR ಎಂಟರ್ ಪ್ರೈಸಸ್ ನಲ್ಲಿ ವಿವಿಧ ಪ್ರತಿಷ್ಠಿತ ಕಂಪನಿಯಲ್ಲಿ ಉಪಯೋಗಿಸಿರುವ ವಿವಿಧ ಕಂಪನಿಯ ಲ್ಯಾಪ್‍ಟಾಪ್‍ಗಳನ್ನು ಟೆಂಡರ್ ಮೂಲಕ ಖರೀದಿಸಿ, ಅವುಗಳನ್ನು ರಿಪೇರಿ ಮತ್ತು ಸರ್ವೀಸ್ ಮಾಡಿಸಿ, ಮರು ಮಾರಾಟ ಮಾಡಲಾಗುತ್ತದೆ.
ಕಳೆದ ಜೂ.16 ರಂದು ರಾತ್ರಿ 9ರ ವೇಳೆ Business ಮುಗಿಸಿ ಅಂಗಡಿಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು ತಡರಾತ್ರಿ ಮುರಿದು ಅಂಗಡಿಯಲ್ಲಿದ್ದ ವಿವಿಧ ಕಂಪನಿಯ 120 ಲ್ಯಾಪ್ ಟಾಪ್‍ಗಳನ್ನು ಕಳ್ಳತನ ಮಾಡಲಾಗಿತ್ತು.
ಈ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಿ 5 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪನಿಯ 110 ಬಳಕೆ ಮಾಡಿರುವ ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಮೊದಲ ಆರೋಪಿಯ ಗುಜರಿ ಸಂಗ್ರಹಿಸುವ ಕೆಲಸ ಮಾಡಿಕೊಂಡಿದ್ದಾಗ ಎರಡನೇ ಆರೋಪಿ ಪರಿಚಯವಾಗಿರುತ್ತದೆ. ಆತನ ಜೊತೆ ಕೆಲಸ ಮಾಡುತಿದ್ದ ಇನ್ನಿಬ್ಬರು ಆರೋಪಿಗಳ ಜೊತೆಯಲ್ಲಿ ಸೇರಿಸಿಕೊಂಡು ಈ ಕೃತ್ಯವೆಸಗಿರುವುದು ತಿಳಿದು ಬಂದಿದೆ.
ಮೊದಲ ಆರೋಪಿಯು ಗುಜರಿ ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ ದೂರುದಾರರ ಪರಿಚಯ ಮಾಡಿಕೊಂಡು ಸೆಕೆಂಡ್ ಹ್ಯಾಂಡ್ ಲ್ಯಾಪ್‍ಟಾಪ್‍ಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಮಾರಾಟ ಮಾಡಿದರೆ ಹಣ ಸಿಗುತ್ತದೆಂದು ತಿಳಿದುಕೊಂಡು ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಹೋಗಿ ಉಪಯೋಗಿಸಿದ ಲ್ಯಾಪ್‍ಟಾಪ್‍ಗಳನ್ನು ಖರೀದಿಸುವ ನೆಪದಲ್ಲಿ ಅಂಗಡಿಯಲ್ಲಿ ಹೆಚ್ಚಿನ ಲ್ಯಾಪ್‍ಟಾಪ್‍ಗಳು ಇರುವುದನ್ನು ಗಮನಿಸಿಕೊಂಡು ಬಂದು ಪಿರ್ಯಾದಿಯೊಂದಿಗೆ ಸ್ನೇಹದಿಂದ ವರ್ತಿಸಿ, ವ್ಯವಹಾರ ಸರಿ ಹೊಂದದ ಕಾರಣದಿಂದ ಪಿರ್ಯಾದಿಯೊಂದಿಗೆ ಮನಸ್ತಾಪ ಮಾಡಿಕೊಂಡು ಹೋಗಿ, ಇತರೆ ಆರೋಪಿಗಳೊಂದಿಗೆ ಸಂಚು ರೂಪಿಸಿ ರಾತ್ರಿ ಸಮಯದಲ್ಲಿ ಬಂದು ಅಂಗಡಿಯ ಬೀಗ ಒಡೆದು ಲ್ಯಾಪ್‍ಟಾಪ್‍ಗಳನ್ನು ಕಳ್ಳತನ ಮಾಡಿದ್ದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಸೋಲದೇವನಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಗೌತಮ್ ಜೆ., ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
Previous Articleಗುರೂಜಿ ಮರಣೋತ್ತರ ಪರೀಕ್ಷೆ ಮುಕ್ತಾಯ- ಅಂತ್ಯಕ್ರಿಯೆಯತ್ತ ಶವ ರವಾನೆಗೆ
Next Article ನ್ಯಾಯಾಂಗ ತನಿಖೆ ಅಗತ್ಯ..!!