ಮೇಘನಾ ರಾಜ್ ಪತಿ ಚಿರಂಜಿವಿ ಸರ್ಜಾ ಮರಣಾನಂತರ ಕೆಲ ವರ್ಷ ಅವರು ಚಿತ್ರರಂಗದಿಂದ ದೂರ ಇದ್ದರು. ಇದೀಗ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಮತ್ತೆ ಬ್ಯುಸಿ ಆಗುವ ಲಕ್ಷಣ ತೋರಿಸಿದ್ದಾರೆ. ತಮ್ಮ ಹೊಸ ಸಿನೆಮಾದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ , “ಸಣ್ಣ ಆಲೋಚನೆ ನಿಜವಾಗಿದೆ. ನಾವು ಪ್ರಾಜೆಕ್ಟ್ ಅಕ್ಟೋಬರ್ 17 2021ರಲ್ಲಿ ಪ್ರಾರಂಭಿಸಿದ್ದೆವು. ಸಾಕಷ್ಟು ಚರ್ಚೆಗಳ ನಂತರ ಸ್ಕ್ರಿಪ್ಟ್ ರಿರೈಟಿಂಗ್, ಲುಕ್ ಟೆಸ್ಟ್ ಹೀಗೆ ಎಲ್ಲ ಪ್ರಯತ್ನದ ನಂತರ ನಾವೆಲ್ಲರು ಒಟ್ಟಾಗಿ ಈ ಕನಸನ್ನು ಆರಂಭಿಸಿದ್ದೇವೆ. ಈ ಸಿನೆಮಾ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಕ್ಯಾಮರಾ ರೋಲಿಂಗ್ ಆಕ್ಷನ್” ಎಂದು ಬರೆದುಕೊಂಡಿದ್ದಾರೆ. ಕಳೆದ ವರ್ಷ ಚಿರು ಜನ್ಮದಿನದಂದು ಮೇಘನಾ ಹೊಸ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಈ ಸಿನಿಮಾ ಚಿರು ಅವರ ಕನಸಾಗಿತ್ತು. ಚಿರುಗೆ ಗೆಳೆಯರ ಜೊತೆ ಸೇರಿ ನಿರ್ಮಾಣ ಸಂಸ್ಥೆ ಆರಂಭಿಸುವ ಕನಸು ಇತ್ತು. ಆದರೆ ಚಿರು ಅಕಾಲಿಕವಾಗಿ ವಿಧಿವಶರಾದರು. ಈಗ ಆ ಕನಸನ್ನು ಗೆಳೆಯರ ಜೊತೆ ಸೇರಿ ಮೇಘನಾ ನನಸು ಮಾಡುತ್ತಿದ್ದಾರೆ.