ಬೆಂಗಳೂರು,ಜು.18- ಹಾಲು, ಮೊಸರು ಸೇರಿದಂತೆ ಪ್ಯಾಕ್ ಮಾಡಿ ಮಾರಾಟ ಮಾಡುವ ವಸ್ತುಗಳಿಗೆ ಜಿಎಸ್‍ಟಿ ಹಾಕಲಾಗಿದೆ. ಇದರಿಂದ ಜನ ಸಾಮಾನ್ಯರು ಬಳಸುವ ವಸ್ತುಗಳ ದರ ಹೆಚ್ಚಳವಾಗಿಲ್ಲ. ಅಲ್ಲದೆ ಇದನ್ನು Businessಿಗಳು ವಾಪಸ್ ಪಡೆಯಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಜಿಎಸ್ ಟಿ ಮಂಡಳಿಯ ಮುಖ್ಯಸ್ಥರೂ ಆಗಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಗತ್ಯ ವಸ್ತುಗಳ ಮೇಲೆ ವಿಧಿಸಿರುವ ಜಿಎಸ್‌ಟಿಯನ್ನು ವ್ಯಾಪಾರಿಗಳು ದಾಖಲೆ ಸಲ್ಲಿಸಿ ಮರುಭರಿಕೆ ಮಾಡಿಕೊಳ್ಳಲು ಅವಕಾಶವಿದೆ. ಈ ಕಾರಣದಿಂದ ಉತ್ಪನ್ನಗಳ ದರ ಹೆಚ್ಚಿಸಲೇಬೇಕಾದ ಅನಿವಾರ್ಯ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಪ್ಯಾಕಿಂಗ್ ಇಲ್ಲದೆ ಸಾಮಾನ್ಯವಾಗಿ ಮಾರಾಟ ಮಾಡುವವರಿಗೆ ಯಾವುದೇ ತೆರಿಗೆ ಹಾಕಿಲ್ಲ. ಬ್ರಾಂಡೆಡ್ ಮೂಲಕ ಪ್ಯಾಕ್ ಮಾಡಿದ ಉತ್ಪನ್ನಗಳಿಗೆ ಮಾತ್ರ 5% ಜಿಎಸ್‍ಟಿ ಹಾಕಿದ್ದೇವೆ. ಅದನ್ನು ಮರುಪಾವತಿ ಮಾಡಲು ಅವಕಾಶವಿದೆ. ಇದನ್ನು ಮಾಡದಿದ್ದರೆ ತೆರಿಗೆ ಗ್ರಾಹಕರಿಗೆ ಬೀಳುತ್ತಿತ್ತು. ಇದನ್ನು ಮರುಪಾವತಿ ಮಾಡಿದರೆ ಈಗಿರುವ ದರ ಹೆಚ್ಚಳವಾಗಲ್ಲ. ಇದರ ಬಗ್ಗೆ ನಾವು ಗಮನಕೊಡುತ್ತೇವೆ. ಮರುಪಾವತಿ ಮಾಡುವ ಅವಕಾಶ ಪಡೆದುಕೊಳ್ಳಬೇಕು. ಇದನ್ನು ಜಿಎಸ್‍ಟಿ ಕೌನ್ಸಿಲ್‍ನಲ್ಲಿ ಮಾತಾಡುತ್ತೇವೆ ಎಂದರು.
ವರ್ತಕರು ಜಿಎಸ್‍ಟಿ ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಗ್ರಾಹಕರ ಮೇಲೆ ಹೊರೆಯಾಗದಂತೆ ಮರು ನಗದೀಕರಣ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿ ಪುನರುಚ್ಚರಿಸಿದರು. ಜಿಎಸ್‍ಟಿ ಹೇರಿಕೆ ಪ್ಯಾಕಿಂಗ್ ಪದಾರ್ಥಗಳಿಗೆ ಅನ್ವಯಿಸಲಿದೆ. ಪ್ಯಾಕಿಂಗ್ ಅಲ್ಲದ ವಸ್ತುಗಳು ತೆರಿಗೆ ವ್ಯಾಪ್ತಿಯಿಂದ ಹೊರಗಿವೆ. ಜಿಎಸ್‍ಟಿ ಉತ್ಪಾದನೆಯಿಂದ ಆರಂಭಗೊಂಡು ಕೊನೆಯ ಸರಪಳಿಯವರೆಗೂ ಸಂಪರ್ಕ ಹೊಂದಿರುತ್ತದೆ ಎಂದು ಹೇಳಿದರು.
ನೋಂದಾಯಿತ ವರ್ತಕರು ನಿಯಮಿತವಾದ ಸಂಪರ್ಕವನ್ನು ಮುಂದುವರೆಸಿದ್ದಾದರೆ ಕಡಿತಗೊಂಡ ಜಿಎಸ್‍ಟಿ ಮರುಪಾವತಿಯಾಗಲಿದೆ. ಹೀಗಾಗಿ ವರ್ತಕರ ಹಂತಕ್ಕಷ್ಟೆ ಜಿಎಸ್‍ಟಿ ಸೀಮಿತಗೊಂಡು ಗ್ರಾಹಕರಿಗೆ ಹೊರೆಯಾಗಬಾರದು ಎಂದು ವಿವರಿಸಿದರು.