ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಶುಭ ಕಾರ್ಯ ನಡೆದಿದೆ.ರವಿಚಂದ್ರನ್ ಅವರ ಹಿರಿಯ ಪುತ್ರ ನಟ ಮನೋರಂಜನ್ (ಮನು) ಸಂಗೀತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಂಗೀತಾ ಅವರು ರವೀಂದ್ರನ್ ಕುಟುಂಬದ ದೂರದ ಸಂಬಂಧಿಯಾಗಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಮದುವೆ ನಡೆಯಿತು.
ಈ ಶುಭ ಘಳಿಗೆಯಲ್ಲಿ ಚಿತ್ರರಂಗದ ಗಣ್ಯರು ಸೇರಿದಂತೆ ಎರಡು ಕುಟುಂಬದವರು, ಸಂಬಂಧಿಕರು, ಆಪ್ತರು ಹಾಗೂ ಗೆಳೆಯರು ಭಾಗವಹಿಸಿದ್ದರು.
ನಟರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಶರಣ್, ನಟಿ ಖುಷ್ಬೂ, ಉಮಾಶ್ರೀ, ಹಂಸಲೇಖಾ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿದಂತೆ ಹಲವರು ನೂತನ ದಂಪತಿಗಳಿಗೆ ಶುಭ ಕೋರಿದರು.
Previous Articleಚಿರತೆ ಉಗುರು, ಹಲ್ಲು ಕಿತ್ತರು..!!
Next Article ಬ್ರೆಡ್ ತರಲು ಹೋದ ಬಾಲಕನ ಅಪಹರಣ