ಬಿಬಿಎಂಪಿ ವಾರ್ಡ್ಗಳ ಮರು ವಿಂಗಡಣೆ ಮಾಡಿ, ವಾರ್ಡ್ ನಂಬರ್ 55ಕ್ಕೆ ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಿದೆ. ಡಿ ಲಿಮಿಟೇಷನ್ ಅಂತಿಮಗೊಳಿಸಿ ಹೊರಡಿಸಿದ ರಾಜ್ಯ ಪತ್ರದಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ವಾರ್ಡ್ ಸಂಖ್ಯೆ 55 ಈ ಮೊದಲು ಕಾವೇರಿ ನಗರ ಎಂದು ಹೆಸರಿತ್ತು. ಇದೀಗ ಕಾವೇರಿ ನಗರದ ಹೆಸರು ಬದಲಿಸಿ ಪುನೀತ್ ರಾಜ್ ಕುಮಾರ್ ವಾರ್ಡ್ ಎಂದು ನಾಮಕರಣ ಮಾಡಲಾಗಿದೆ. ಈ ಕುರಿತು 8ಕ್ಕೂ ಹೆಚ್ಚು ಕನ್ನಡ ಸಂಘಟನೆಗಳು ಸಚಿವ ಗೋಪಾಲಯ್ಯಗೆ ಮನವಿ ಸಲ್ಲಿಸಿದ್ದರು, ಹೊಸ ವಾರ್ಡ್ಗೆ ಪುನೀತ್ ರಾಜಕುಮಾರ್ ಹೆಸರಿಡಲು ಮನವಿ ಮಾಡಿದ್ದರು. ಅಭಿಮಾನಿಗಳ ಮನವಿಯನ್ನು ಸರ್ಕಾರದ ಗಮನಕ್ಕೆ ಸಚಿವ ಗೋಪಾಲಯ್ಯ ತಂದಿದ್ದರು. ಸಚಿವ ಗೋಪಾಲಯ್ಯ ಹಾಗು ಸಾರ್ವಜನಿಕರ ಮನವಿಗೆ ಸರ್ಕಾರ ಸ್ಪಂದಿಸಿದೆ ಗೆಜೆಟ್ನಲ್ಲಿ ಪ್ರಕಟಿಸಿದ ಅಂತಿಮ ಕರಡು ಪ್ರತಿಯಲ್ಲಿ ಪುನೀತ್ ವಾರ್ಡ್ ಪ್ರಕಟ ಮಾಡಲಾಗಿದೆ. 198 ವಾರ್ಡ್ಗಳಿಂದ 243 ವಾರ್ಡ್ಗಳಿಗೆ ವಿಂಗಡಣೆಯಾಗಿದ್ದು, ಸಾರ್ವಜನಿಕರಿಂದ 3 ಸಾವಿರಕ್ಕೂ ಅಧಿಕ ಆಕ್ಷೇಪಣಾ ಅರ್ಜಿ ಬಂದಿತ್ತು. ಅರ್ಜಿ ವಿಲೇವಾರಿ ಮುಕ್ತಾಯಗೊಳಿಸಿ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.