ಬೆಳಗಾವಿ,ಆ.18- ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಪತಿಯೇ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ
ಸವದತ್ತಿ ಪಟ್ಟಣದಲ್ಲಿ ನಡೆದಿದೆ.
ಸವದತ್ತಿಯ ಅಯ್ಯಪ್ಪಸ್ವಾಮಿ ನಗರದ ಶಬಾನಾ(28) ಕೊಲೆಯಾದವರು.ಕೃತ್ಯ ನಡೆಸಿದ ಪತಿ ಮೆಹಬೂಬ್ ಸಾಬ್ ಪೊಲೀಸರಿಗೆ ಶರಣಾಗಿದ್ದಾನೆ.
ಬೀಡಿ ಗ್ರಾಮದ ಶಬಾನಾ ಜೊತೆ ಮುನವಳ್ಳಿ ನಿವಾಸಿ ಮೆಹಬೂಬ್‌ಸಾಬ್ ವಿವಾಹವಾಗಿತ್ತು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಶಬಾನಾ ಪತಿಯಿಂದ ದೂರವಾಗಿ ಮಕ್ಕಳೊಂದಿಗೆ ಅಯ್ಯಪ್ಪಸ್ವಾಮಿ ನಗರದಲ್ಲಿ ವಾಸವಿದ್ದರು.
ಪತ್ನಿ ಇರುವ ಕಡೆಗೆ ಇಂದು ಬೆಳಗ್ಗೆ ಬಂದ ಮೆಹಬೂಬ್ ಸಾಬ್ ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಚಾಕುವಿನಿಂದ ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಬಳಿಕ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ಸವದತ್ತಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಲಾಗಿದ್ದಾರೆ.
Previous Articleಶೂಟಿಂಗ್ ವೇಳೆ ಅವಘಡ: ಬಾಹುಬಲಿ ನಟ ಆಸ್ಪತ್ರೆಗೆ ದಾಖಲು
Next Article ಸಿ.ಸಿ.ಕ್ಯಾಮೆರಾದಿಂದ ಸಿಕ್ಕಿಬಿದ್ದ ಹಂತಕ…